ಮಂಗಳೂರು ; ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಲ್ಲೂ ಹಲವಾರು ರೀತಿಯ ಸ್ಥುಪ್ತ ಪ್ರತಿಭೆಗಳು ಇರುತ್ತದೆ. ಅದನ್ನು ಪ್ರಚೋದನೆಗೊಳಿಸಿ ಸೂಕ್ತವಾದ ತರಬೇತಿ ನೀಡಿದಲ್ಲಿ ಆ ಪ್ರತಿಭೆಗಳು ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವುದರಲ್ಲಿ ಸಂದೇಹವಿಲ್ಲ. ಮಾತ್ರವಲ್ಲ, ಭಿನ್ನ ಸಾಮರ್ಥ್ಯದವರನ್ನು ಆ ಮೂಲಕ ಮುಖ್ಯವಾಹಿನಿಗೆ ತರಲು ಸಾಧ್ಯವಿದೆ ಎಂಬುವುದು ನಿಜವಾದ ಮಾತು ಎಂದು ವಸಂತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಇದೇ ಉದ್ದೇಶವನ್ನಿರಿಸಿಕೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಮಾನ ಮನಸ್ಕರನ್ನೊಡಗೂಡಿಸಿ 2010ರಲ್ಲಿ ಪ್ರಾರಂಭಗೊಂಡ ಸಂಸ್ಥೆಯೇ ಸ್ಪೋರ್ಟ್ಸ್ ಅಂಡ್ ಕಲ್ಬರಲ್ ಅಕಾಡೆಮಿ ಫಾರ್ ಡಿಫರೆಂಟ್ಲಿ ವಿಬಲ್ಡ್(ರಿ.) (ಸಕಾಡ) 2010ರಿಂದ ಇಂದಿನವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಹಾಗೂ ರಾಜ್ಯಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಮೈಸೂರು, ಮಂಡ್ಯ, ಸುತ್ತೂರು, ಮಂಗಳೂರು, ಉಡುಪಿ, ದಾವಣಗೆರೆ, ಮಡಿಕೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಸಿಕೊಂಡು ಬಂದಿದೆ. ಇತ್ತೀಚೆಗೆ 2024 ನವೆಂಬರ್ ತಿಂಗಳ 11ನೇ ತಾರೀಕಿನಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ‘ಅರುಣಚೇತನ’ ವಿಶೇಷ ಶಾಲೆಯಲ್ಲಿ ಸಭೆ ಸೇರಿ ಇದೇ ನೂತನ ವರ್ಷ 2025 ಜನವರಿ ತಿಂಗಳ 11 ಮತ್ತು 12ನೇ ದಿನಾಂಕದಂದು 2 ದಿನಗಳ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಜನಪದ ನೃತ್ಯ ಸ್ಪರ್ಧೆ “ಸಕಾಡೋತ್ಸವ-2025” ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ‘ಆಶಾಸದನ’ ವಿಶೇಷ ಶಾಲೆಯ ಸಹಯೋಗದೊಂದಿಗೆ ಸುಭಾಷ್ ನಗರದಲ್ಲಿರುವ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಸಲಾಗುವುದು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಒಟ್ಟು 30 ಶಾಲೆಗಳು ಭಾಗವಹಿಸಲಿದ್ದು, ಒಟ್ಟು 400 ವಿಶೇಷ ಮಕ್ಕಳು ಹಾಗೂ 200ಕ್ಕೂ ಮಿಕ್ಕಿ ಅವರ ಸಹಾಯಕರು ಭಾಗವಹಿಸುವ ನಿರೀಕ್ಷೆ ಇದೆ. ಸಾಂಥೋಂ ಪಬ್ಲಿಕ್ ಸ್ಕೂಲ್ ಮಂಡ್ಯ ಇಲ್ಲಿ ಎಲ್ಲರಿಗೂ 2 ದಿನ ರಾತ್ರಿ ಉಳಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸಾಂತೋಮೆ ಪಬ್ಲಿಕ್ ಸ್ಕೂಲಿನ 50 ಮಂದಿ ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ನೆರವಾಗಲಿದ್ದಾರೆ. “ಸಕಾಡೋತ್ಸವ-2025″ರಲ್ಲಿ ಭಾಗವಹಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದು, ಅದರ ಜವಾಬ್ದಾರಿಯನ್ನು ಹೊಟೇಲ್ ಉದ್ಯಮಿ ಶ್ರೀ ಅನಿಲ್ ಅಪೂರ್ವ ವಹಿಸಿಕೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.
ಭಿನ್ನ ಸಾಮರ್ಥ್ಯದ ಮಕ್ಕಳ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವ ಸಲುವಾಗಿ 2025 ಜನವರಿ 11ನೇ ತಾರೀಕು ಪೂರ್ವಾಹ್ನ ಘಂಟೆ 9ಕ್ಕೆ ಸರಿಯಾಗಿ ಮಂಡ್ಯ ಜಿಲ್ಲಾ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿರುವ ಉದ್ಯಾನದಿಂದ ಡಾ| ಬಿ.ಆರ್. ಅಂಬೇಡ್ಕರ್ ಭವನಕ್ಕೆ ಪಥ ಸಂಚಲನ ನಡೆಯಲಿದ್ದು, ಪಥ ಸಂಚಲನದ ಉದ್ಘಾಟನೆಯನ್ನು ಮಂಡ್ಯ ಜಿಲ್ಲಾ ಹೊಟೇಲ್ ಉದ್ಯಮಿ ಶ್ರೀ ಅನಿಲ್ ಅಪೂರ್ವ ನೆರವೇರಿಸಲಿದ್ದಾರೆ.
ಸಕಾಡೋತ್ಸವ-2025ರ ಪ್ರಥಮ ಸ್ಥಾನ ವಿಜೇತರಿಗೆ ನಗದು ಬಹುಮಾನ ರೂ.15,000/-, ದ್ವಿತೀಯ ಸ್ಥಾನದ ವಿಜೇತ ತಂಡಕ್ಕೆ ರೂ. 12,000/- ಹಾಗೂ ತೃತೀಯ ಸ್ಥಾನ ವಿಜೇತರಿಗೆ 10,000/- ನಗದು ನೀಡಲಾಗುವುದು ಹಾಗೂ 10 ಸಮಾಧಾನಕರ ಬಹುಮಾನ. ಪ್ರತೀ ತಂಡಕ್ಕೆ ರೂ. 2,000/ದಂತೆ ನೀಡಲಾಗುವುದು. ಮಾತ್ರವಲ್ಲದೆ, ವಿಜೇತ ತಂಡಕ್ಕೆ ಫಲಕ, ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೆ ಸಾಂತೋಮೆ ಸಮೂಹ ಸಂಸ್ಥೆ ವತಿಯಿಂದ ನೆನಪಿನ ಕಾಣಿಕೆ ನೀಡಲಾಗುವುದು.
ಜನವರಿ 11ರಂದು ಪೂರ್ವಾಹ್ನ ಘಂಟೆ 10.30ಕ್ಕೆ ಜರುಗಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೆಂಟ್ ಥಾಮಸ್ ಮಿಷನ್ ಸೊಸೈಟಿಯ ವಲಯ ನಿರ್ದೇಶಕರಾಗಿರುವ ವಂದನೀಯ ಗುರುಗಳಾದ ಸೋಜನ್ ಎಂ.ಎಸ್.ಟಿ. ಆಶೀರ್ವಚನ ಗೈಯಲಿದ್ದಾರೆ.
“ಸಕಾಡೋತ್ಸವ-2025 ನ್ನು ಮಂಡ್ಯ ಜಿಲ್ಲಾಧಿಕಾರಿ ಡಾ। ಕುಮಾರ ಭಾ.ಆ.ಸೇ. ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಸರಕಾರದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ರಾಘವೇಂದ್ರ ಟಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಡ್ಯ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐ.ಪಿ.ಎಸ್., ಮಂಡ್ಯ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಎಸ್. ರಾಜಮೂರ್ತಿ, ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಶ್ರೀ ಎಸ್.ಎಸ್. ಕೋಮಲ್ ಕುಮಾರ್, ಸಕಾಡ ಇದರ ಗೌರವ ಅಧ್ಯಕ್ಷರಾದ ಶ್ರೀ ಮಹಾಬಲ ಮಾರ್ಲ ಜನಜಾಗೃತಿ ಸೇವಾ ಸಂಸ್ಥೆ ಮೈಸೂರು ಇದರ ಶ್ರೀ ಎನ್. ವಿ. ಮೂರ್ತಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಕಾಡ ಇದರ ಅಧ್ಯಕ್ಷರಾಗಿರುವ ವಂದನೀಯ ಗುರುಗಳಾದ ಜೋಯ್ಸನ್ ಜೋಸ್ ಎಂ.ಎಸ್.ಟಿ. ಅಧ್ಯಕ್ಷತೆ ವಹಿಸಲಿದ್ದಾರೆ.
ದಿನಾಂಕ 12-01-2025ರಿಂದ ಸಂಜೆ ಗಂಟೆ 3.00ಕ್ಕೆ ಸರಿಯಾಗಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಆಶಾಸದನ ವಿಶೇಷ ಶಾಲೆ ಮಂಡ್ಯ ಇದರ ನಿರ್ದೇಶಕರಾಗಿರುವ ವಂದನೀಯ ಗುರುಗಳು ಹಬ್ಬಿ ಮ್ಯಾಥ್ಯು ಎಂ.ಎಸ್.ಟಿ. ಆಶೀರ್ವಚನ ನೀಡಲಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪಿ.ರವಿಕುಮಾರ್ (ಗಣಿಗ) ಹಾಗೂ ಸಾಂಥೋಂ ಪಬ್ಲಿಕ್ ಸ್ಕೂಲ್ ಇಲ್ಲಿನ ಪ್ರಬಂಧಕರಾದ ವಂದನೀಯ ಗುರುಗಳು ಸಲಾಸ್‌ರವರ ಗೌರವ ಉಪಸ್ಥಿತಿ ಇರುವುದು ಮಂಡ್ಯ ಜಿಲ್ಲೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರಾದ ಶ್ರೀ ಡಿ.ಡಿ.ಕೃಷ್ಣಕುಮರ್ ಕ.ಆ.ಸೇ. ಸಮಾರೋಪ ಸಂದೇಶ ನೀಡಲಿದ್ದಾರೆ. ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾದ ಶ್ರೀ ಹೆಚ್. ವಿ. ಗೋಪಾಲಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಕಾಡ ಇದರ ಸಲಹೆಗಾರರಾಗಿರುವ ಡಾ. ಯು.ಸಿ.ಪೌಲೋಸ್, ಕಾರ್ಯಾಧ್ಯಕ್ಷರಾದ ಶ್ರೀ ಜಯವಿಠಲ್, ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರುಗಳಾದ ಶ್ರೀ ಡಿ.ಡಿ.ಮೇಚನ್ನವರ್ ಮತ್ತು ಶ್ರೀ ಶಿವುಕುಮಾರ್ ಹಾವೇರಿ ಹಾಗೂ ಎಸ್.ಆರ್. ಫೌಂಡೇಶನ್ ಮೈಸೂರು ಇಲ್ಲಿನ ಸಿ.ಎಸ್.ಆರ್. ಎಕ್ಸಿಕ್ಯೂಟಿವ್ ಶ್ರೀ ಹರೀಶ್ ಆರ್. ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಕಾಡ ಅಧ್ಯಕ್ಷರಾದ ವಂದನೀಯ ಗುರುಗಳು ಜೋಯ್ಸನ್ ಜೋಸ್ ಎಂ.ಎಸ್.ಟಿ. ಅಧ್ಯಕ್ಷತೆವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್, ಮಹಾಬಲ ಮಾರ್ಲ, ಅಗ್ನೇಲ್ ಕುಂದರ್,ಕಾಂತಿ ಹರೀಶ್,ಮಹಮ್ಮದ್ ಬಶೀರ್ ರವರು ಉಪಸ್ಥಿತರಿದ್ದರು.


