Tuesday, February 17, 2026
Flats for sale
Homeಜಿಲ್ಲೆಮಂಗಳೂರು : ಜನರ ನೆಮ್ಮದಿ,ಶಾಂತಿಯನ್ನು ಕಾಯುವ ಪೊಲೀಸ್ ಇಲಾಖೆಗೆ ಕೊಟ್ಟಂತಹ ಅವಕಾಶವನ್ನು ಧಾರೆಎಳೆದಿದ್ದೇನೆ : ಗೃಹಸಚಿವ...

ಮಂಗಳೂರು : ಜನರ ನೆಮ್ಮದಿ,ಶಾಂತಿಯನ್ನು ಕಾಯುವ ಪೊಲೀಸ್ ಇಲಾಖೆಗೆ ಕೊಟ್ಟಂತಹ ಅವಕಾಶವನ್ನು ಧಾರೆಎಳೆದಿದ್ದೇನೆ : ಗೃಹಸಚಿವ ಡಾ.ಜಿ ಪರಮೇಶ್ವರ್.

ಮಂಗಳೂರು : ಮಂಗಳೂರು ನಗರ ಪೋಲಿಸ್ ಮತ್ತು ದ.ಕ ಜಿಲ್ಲಾ ಪೋಲಿಸ್ ಮೂಡಬಿದರೆ ಪೋಲಿಸ್ ಹಾಗೂ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನೂತನ ವಸತಿಗೃಹಗಳ ಕಟ್ಟಡ ನಿರ್ಮಾಣದ ಉದ್ಘಾಟನಾ ಸಮಾರಂಭ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮ ಇಂದು ಮಂಗಳೂರಿನ ಪೋಲಿಸ್ ಕ್ವಾಟ್ರಸ್ ನಲ್ಲಿ ನಡೆಯಿತು.ಕರ್ನಾಟಕ ರಾಜ್ಯ ಸರಕಾರದ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ರವರು ಕಟ್ಟಡದ ಶಂಕುಸ್ಥಾಪನೆ ಹಾಗೂ ಉದ್ಘಾಟಿನೆಯನ್ನು ನೆರೆವೆರೆಸಿದರು.

ಬಳಿಕ ಮಾತನಾಡಿದ ಅವರು ಪೊಲೀಸ್ ಇಲಾಖೆ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತೆ ಅವರ ನೆಮ್ಮದಿಯನ್ನು ಕೂಡ ಕಾಯುವ ಕೆಲಸ ಸರಕಾರದ್ದು,ತಾಯಿ ಮನೆಯನ್ನು ಚೆನ್ನಾಗಿ ಇಟ್ಟ್ಟುಕೊಂಡರೆ ಅಲ್ಲೇ ಶಾಂತಿ ಸಿಗುತ್ತೆ ಎಂದರು. ಮಂಗಳೂರು ಕಮಿಷನರೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಗಳ ಸಭೆ ನಡೆಸಿದ್ದೇನೆ ಅಪರಾಧ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ,ಆ್ಯಂಟಿ ಡ್ರಗ್ಸ್ ಕಾರ್ಯಾಚರಣೆ ತ್ವರಿತವಾಗಿ ಹಾಗು ಪರಿಣಾಮ ಕಾರಿಯಾಗಿ ನಡೆಯುತ್ತಿದೆ ಡ್ರಗ್ಸ್ ಪ್ರಕಾರಗಳ ಸಂಖ್ಯೆ ಕಡಿಮೆಯಾಗಿದೆ,ಕಾಲೇಜುಗಳ ಮೇಲೆ ನಿಗಾ ವಹಿಸುವಂತೆ ಈ ಹಿಂದೆ ನಾನು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೆ ಎಂದರು. ಆ ನಿಟ್ಟಿನಲ್ಲಿ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಂಡಿದ್ದಾರೆ ಡ್ರಗ್ ಪೆಟ್ಲಿಂಗ್ ಮತ್ತು ಡ್ರಗ್ ಸೇವನೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಆ್ಯಂಟಿ ಡ್ರಗ್ ಕಾರ್ಯಾಚರಣೆ ಮತ್ತಷ್ಟು ಹೆಚ್ಚಿಸುವಂತೆ ಸೂಚನೆಯನ್ನು ನೀಡಿದ್ದೇನೆ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಹತ್ಯಾ ಪ್ರಕರಣಗಳು ಸರಣಿ ಹತ್ಯೆಗಳು ನಿಂತಿವೆ ಎಂದರು.

ಧ್ವೇಷ ಭಾವನೆಯಿಂದ ನಡೆಯುತ್ತಿದ್ದ ಹತ್ಯೆಗಳು ನಿಂತಿವೆ ಇದು ನನಗೆ ತೃಪ್ತಿ ತಂದಿದೆ,ಕರಾವಳಿಯಲ್ಲಿ ಅಭಿವೃದ್ಧಿ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ,ಮಂಗಳೂರು ರಾಜ್ಯದ ಪ್ರತಿಷ್ಠಿತ ಜಿಲ್ಲೆ ಇಲ್ಲಿ ಮತ್ತೇ ಅಭಿವೃದ್ಧಿ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಐಟಿ ಉದ್ಯಮ ಹಾಗೆ ಸೆಮಿಕಂಡಕ್ಟರ್ ಗಳ ಉತ್ಪಾದನೆ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಶ್ಚಿಮ ವಲಯದ ಐ.ಜಿ ಅಮೀತಗ ಸಿಂಗ್,ಮಂಗಳೂರು ನಗರ ಪೋಲಿಸ್ ಆಯುಕ್ತರು ಸುಧೀರ್ ಕುಮಾರ್ ರೆಡ್ಡಿ, ಎಸ್. ಪಿ ಅರುಣ್.ಕೆ ,ವೀರಭದ್ರಪ್ಪಜಿ ,ಮಿಥುನ್ ಎಚ್.ಎನ್, ಶಾಲೆಟ್ ಪಿಂಟೋ ,ಎಂ.ಎಂ ಗಫೂರ್ ,ಮಮತಾ ಗಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular