ಮಂಗಳೂರು : ಮಂಗಳೂರಿನ ವರವಲಯದ ಅಡ್ಯಾರ್ ಗಾರ್ಡನ್ ಬಳಿ ಚಲಿಸುತ್ತಿದ್ದ ಕಾರು ಒಂದು ಹೊತ್ತಿ ಉರಿದಿದೆ.2011-12 ಮಾಡೆಲ್ BMW ಕಾರು ಇದಾಗಿದ್ದು ಕಾರಿಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿದೆ.

ಏಕಾಏಕಿ ಕಾರು ಹೊತ್ತಿಕೊಂಡಿದ್ದು ಸ್ಥಳೀಯರು ಕಾರಿನ ಬೆಂಕಿಯನ್ನು ನಂದಿಸಲು ಯತ್ನಿಸುವ ಮೊದಲೇ ಕಾರು ಸುಟ್ಟು ಸಂಪೂರ್ಣ ಕರಕಲಾಗಿತ್ತು. ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು ಅಗ್ನಿಶಾಮಕ ದಳ ತಲುಪುವಷ್ಟರಲ್ಲಿ ಕಾರು ಸಂಪೂರ್ಣ ಬಸ್ಮ ವಾಗಿದೆ.
BMW ಕಾರು ದೆಹಲಿ ರಿಜಿಸ್ಟ್ರೇಷನ್ ಆಗಿದ್ದು ಚಾಲಕ ಬಿ ಸಿ ರೋಡ್ ಮೂಲದ ಗುರುದೀಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ . ಈ ಹಿಂದೆ ಸೆಪ್ಟೆಂಬರ್ 5 ರಂದು ಸುರತ್ಕಲ್ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ್ದು, ಮತ್ತೊಂದು ಬಿಎಂಡಬ್ಲ್ಯು ಕಾರು ಬೆಂಕಿಗೆ ಆಹುತಿಯಾಗಿತ್ತು.ಬೆಂಕಿಗೆ ಕಾರಣವೇನು ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


