ಮಂಗಳೂರು : ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್‌ನ ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ ಬಳಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಸಿಮೆಂಟ್ ಶೀಟ್ ತುಂಡು ಎಸೆದ ಘಟನೆ ಮೇ 24ರ ರಮುಂಜಾನೆ ನಡೆದಿದೆ.
ರಾತ್ರಿ ಸುಮಾರು 2:07ರ ವೇಳೆಗೆ ಪೊಲೀಸ್ ಸಿಬ್ಬಂದಿ ಹನುಮಂತ ಕಂಠಿ ಹಾಗೂ ಹೋಂ ಗಾರ್ಡ್ ಬಸವರಾಜ್ ರಸ್ತೆ ಬದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಸಿಮೆಂಟ್ ಶೀಟ್‌ನ ತುಂಡನ್ನು ಎಸೆದಿದ್ದಾರೆ.
ಈ ಘಟನೆಯಿಂದ ಹನುಮಂತ ಕಂಠಿ ಅವರ ತಲೆಗೆ ಸಣ್ಣ ಗಾಯವಾಗಿದ್ದು, ಬಳಿಕ ಅವರು ಎ.ಜೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಪರೀಕ್ಷಿಸಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.


