ಮಂಗಳೂರು : ಆಗಸ್ಟ್ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್ನಲ್ಲಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಸಪ್ತಪದಿ ತುಳಿದಿದ್ದ ಜೋಡಿ ಮತ್ತೊಮ್ಮೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮಂಗಳೂರಿನಲ್ಲಿ ಮದುವೆಯಾಗಿದ್ದಾರೆ.



ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ನಟಿ ಸೋನಲ್ ಮೊಂಥೆರೋ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಸೋನಲ್ ಅವರು ಬಿಳಿ ಬಣ್ಣದ ಲಾಂಗ್ ಗೌನ್ನಲ್ಲಿ ಮಿಂಚಿದ್ದರೆ, ತರುಣ್ ಸುಧೀರ್ ವೈಟ್ ಸೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಷನ್ನಲ್ಲಿ ನವವಧು ಸೋನಾಲ್ ಗೋಲ್ಡ್ ಕಲರ್ ಡ್ರೆಸ್ ಧರಿಸಿದ್ದರು. ಚರ್ಚ್ ವೆಡ್ಡಿಂಗ್ ಬಳಿಕ ಸ್ಟಾರ್ ಜೋಡಿ ಮಂಗಳೂರಿನಲ್ಲಿ ಅದ್ಧೂರಿ ರೆಸೆಪ್ಷನ್ ಸಹ ಮಾಡಿಕೊಂಡಿದೆ. ಈ ಅದ್ಧೂರಿ ರೆಸೆಪ್ಷನ್ನಲ್ಲಿಯೂ ತರುಣ್ ಸುಧೀರ್ ಬ್ರೌನ್ ಸೂಟ್ ಹಾಗೂ ನಟಿ ಸೋನಲ್ ಸೀರೆಯಲ್ಲಿ ಮಿಂಚಿದ್ದಾರೆ.


