Monday, February 9, 2026
Flats for sale
Homeಜಿಲ್ಲೆಮಂಗಳೂರು : ಕೆ.ಎಸ್. ಆರ್. ಟಿ.ಸಿ ಬಳಿ ಚಲಿಸುತ್ತಿರುವ ಕಾರಿಗೆ ದಿಡೀರ್ ಬೆಂಕಿ,ಚಾಲಕ ಪ್ರಾಣಪಾಯದಿಂದ ಪಾರು.

ಮಂಗಳೂರು : ಕೆ.ಎಸ್. ಆರ್. ಟಿ.ಸಿ ಬಳಿ ಚಲಿಸುತ್ತಿರುವ ಕಾರಿಗೆ ದಿಡೀರ್ ಬೆಂಕಿ,ಚಾಲಕ ಪ್ರಾಣಪಾಯದಿಂದ ಪಾರು.

ಮಂಗಳೂರು ; ಮಂಗಳೂರು ಕದ್ರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ಎಸ್ ಆರ್ ಟಿ ಸಿ ಬಳಿ ಇಂದು ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಚಲಿಸುತ್ತಿದ್ದ ರೆನಾಲ್ಟ್ ಕಂಪೆನಿಯ ಟ್ರೈಬರ್ ಕಾರೊಂದಕ್ಕೆ ಮಧ್ಯರಸ್ತೆಯಲ್ಲೇ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಮಂಗಳೂರು ವಿಮಾನ ನಿಲ್ದಾಣದಿಂದ ಮಣ್ಣಗುಡ್ಡಕ್ಕೆ ಕಡೆಗೆ ತೆರಳುತ್ತಿದ್ದ ಕಾರಿನ ಒಳಭಾಗದಿಂದ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ಕಾರಿನಿಂದ ಇಳಿದು ಮಣ್ಣಗುಡ್ಡ ನಿವಾಸಿ ಶೇಖರ್ ಶೆಟ್ಟಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯರು ತಕ್ಷಣ ಸ್ಪಂದಿಸಿ ಕಾರಿಗೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕದ್ರಿ ಸಂಚಾರ ಪೋಲಿಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಕಾರಿಗೆ ಬೆಂಕಿ ಹೊತ್ತಿಕೊಂಡ ಕಾರಣ ತಿಳಿದುಬಂದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular