ಮಂಗಳೂರು ; ಅ. 26 ಸಂತ ಅಂತೋನಿಯವರ ಚರ್ಚ್ ಕೂಳೂರು ಶಾಲೆಯ ಪ್ರೈಮರಿ ಶಾಲಾ ಸಭಾಂಗಣದಲ್ಲಿ ಕಥೋಲಿಕ್ ಸಭಾ ಮತ್ತು ಐಸಿವೈಮ್ ಕೂಳೂರು ಘಟಕಗಳ ಸಂಯುಕ್ತ ಆಶ್ರಯದಲ್ಲಿ, ಕಮ್ಯುನಿಟಿ ಎಂಪವರ್‌ಮೆಂಟ್ ಟ್ರಸ್ಟ್ (ಮಿಲಾಗ್ರಿಸ್,ಮಂಗಳೂರು) ಹಾಗೂ ಮಂಗಳೂರು ಡಿಜಿಟಲ್ ಸೇವಾ ಕೇಂದ್ರ, ಕುಲಶೇಖರ ಇವುಗಳ ಸಹಯೋಗದೊಂದಿಗೆ ಸರ್ಕಾರಿ ಸೌಲಭ್ಯಗಳ ಶಿಬಿರವನ್ನು ರವಿವಾರ ದಿನಾಂಕ 26 ಅಕ್ಟೋಬರ್, 2025ರಂದು ಆಯೋಜಿಸಲಾಯಿತು.







ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಗರ್ಜಿಯ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಅರುಣ್ ರೋಶನ್ ಡಿಸೋಜ, ಅಯೋಗಗಳ ಸಂಯೋಜಕರಾದ ಡಾl ವಿನಯ್ ರಜತ್ ಡಿಸೋಜ, ಸಮುದ್ರ ತಾರಾ ಕಾನ್ವೆಂಟಿನ ಮುಖ್ಯಸ್ಥರಾದ ಧlಭl ಜಾನೆಟ್ ಲೋಬೊ, ಕಮ್ಯುನಿಟಿ ಎಂಪವರ್‌ಮೆಂಟ್ ಟ್ರಸ್ಟ್ ಇದರ ಕಾರ್ಯದರ್ಶಿ ಶ್ರೀಮತಿ ಲೀಝಿ ಪಿಂಟೊ, ಕಾರ್ಯಕ್ರಮದ ಸಂಚಾಲಕರಾದ ಆಲ್ವಿನ್ ಡಿಸೋಜಾ ಕ. ಸಭಾ ಘಟಕದ ಅಧ್ಯಕ್ಷ ರೋವಿನ್ ಡಿಸೋಜ, ಐಸಿವೈಎಂ ಘಟಕದ ಅಧ್ಯಕ್ಷ ಅರ್ವಿನ್ ಮೊಂತೇರೊ, ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲವಿನ ಡಿಸೋಜರವರು ಕಾರ್ಯಕ್ರಮ ನಿರೂಪಿಸಿದರು.
ಈ ಶಿಬಿರದಲ್ಲಿ ಆಧಾರ್ ಕಾರ್ಡ್ ನವೀಕರಣ, ಪಾನ್ ಕಾರ್ಡ್, ಪಿಂಚಣಿ ಕಾರ್ಡ್, ಉದ್ಯೋಗ ಕಾರ್ಡ್, ಆಯುಷ್ಮಾನ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್ ನವೀಕರಣ ಸೇರಿದಂತೆ ಅನೇಕ ಸರ್ಕಾರಿ ಸೇವೆಗಳನ್ನು ಸ್ಥಳದಲ್ಲಿಯೆ ನೀಡಲಾಯಿತು.
ಸಮಾಜದ ವಿವಿಧ ವರ್ಗದ ಸುಮಾರು 180 ಜನರು ಈ ಶಿಬಿರದ ಪ್ರಯೋಜನವನ್ನು ಪಡೆದರು. ಭಾಗವಹಿಸಿದವರಿಂದ ಈ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿತು.
ಕಾರ್ಯಕ್ರಮದ ಯಶಸ್ಸಿಗೆ ಘಟಕದ ಸದಸ್ಯರು ಹಾಗೂ ಸ್ವಯಂಸೇವಕರು ಶ್ರಮಿಸಿದರು.


