Tuesday, March 11, 2025
Flats for sale
Homeಜಿಲ್ಲೆಮಂಗಳೂರು : ಕುಳಾಯಿ ಬಾರ್ ಬಳಿ ರೌಡಿಶೀಟರ್ ಮೇಲೆ ತಲವಾರು ದಾಳಿ, ಕೋಡಿಕೆರೆ ಗ್ಯಾಂಗ್ ನಿಂದ...

ಮಂಗಳೂರು : ಕುಳಾಯಿ ಬಾರ್ ಬಳಿ ರೌಡಿಶೀಟರ್ ಮೇಲೆ ತಲವಾರು ದಾಳಿ, ಕೋಡಿಕೆರೆ ಗ್ಯಾಂಗ್ ನಿಂದ ಕೃತ್ಯ,ಪ್ರಕರಣ ದಾಖಲು.

ಮಂಗಳೂರು : ಸುರತ್ಕಲ್ ಬಳಿಯ ಕುಳಾಯಿ ಬಾರ್ ಎದುರು ಬುಧವಾರ ರಾತ್ರಿ ರೌಡಿ ಶೀಟರ್ ನನ್ನು ಹತ್ಯೆಗೈಯಲು ಯತ್ನಿಸಿದ ಘಟನೆ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಭರತ್ ಶೆಟ್ಟಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕುಖ್ಯಾತ ಮನೋಜ್ ಕೋಡಿಕೆರೆ ತಂಡ ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿಸಿದ್ದಾರೆ.

ಕೊಡಿಕೆರೆ ನಿವಾಸಿ ಭರತ್ ಶೆಟ್ಟಿ (32) ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಸುರತ್ಕಲ್ ಮತ್ತು ಪಾಂಡೇಶ್ವರ ಪೊಲೀಸ್ ಠಾಣೆಗಳಲ್ಲಿ ಕೊಲೆ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಮನೋಜ್ ಕೋಡಿಕೆರೆ ಗ್ಯಾಂಗ್ ಸದಸ್ಯನಾಗಿದ್ದ ಭರತ್ ಗೆ ಗ್ಯಾಂಗ್ ಲೀಡರ್ ಮನೋಜ್ ಕೋಡಿಕೆರೆ ಜತೆ ಮನಸ್ತಾಪ ಉಂಟಾಗಿ ಬಳಿಕ ಗ್ಯಾಂಗ್ ವಾರ್ ನಡೆದಿತ್ತು.

ಬುಧವಾರ ರಾತ್ರಿ ಭರತ್ ಶೆಟ್ಟಿ ಕುಳಾಯಿ ಬಾರ್‌ನ ಹೊರಗೆ ನಿಂತಿದ್ದಾಗ ಚೇತು, ಗುಜ್ಜೆ ಶೈಲು, ರಾಜು ಫರಂಗಿಪೇಟೆ, ಕಿಶನ್ ಕೊಡಿಕೆರೆ ಸೇರಿದಂತೆ ಮನೋಜ್ ಕೋಡಿಕೆರೆ ಗ್ಯಾಂಗ್‌ನ ಸದಸ್ಯರು ಕಾರಿನಲ್ಲಿ ಬಂದು ಕತ್ತಿಗಳಿಂದ ಹಲ್ಲೆ ನಡೆಸಿದ್ದಾರೆ. ದಾಳಿಯ ವೇಳೆ ಭರತ್ ಅವರ ಒಂದು ಬೆರಳು ತುಂಡಾಗಿದೆ. ಅಪಾಯ ಅರಿತ ಭರತ್ ಸ್ಥಳದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಸದ್ಯ ಘಟನೆ ಕುರಿತು ಸುರತ್ಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular