ಮಂಗಳೂರು : ಕೊಡಿಯಾಲ್ಬೈಲ್ನ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ ವತಿಯಿಂದ 1೦ ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಕುದ್ರೋಳಿಯ ‘ಕೂಟಕ್ಕಳ ಆಡಿಟೋರಿಯಂ’ನಲ್ಲಿ ನೆರವೇರಿತು. ಸಹಸ್ರಾರು ಭಕ್ತರು ಈ ವೇಳೆ ಹಾಜರಿದ್ದರು.


ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಭಗವತೀ ಅಮ್ಮನವರಲ್ಲಿ ಪ್ರಾರ್ಥನೆ ನೆರವೇರಿ, ಕ್ಷೇತ್ರದ ಆಚಾರಪಟ್ಟವರಿಂದ ದೀಪ ಪ್ರಜ್ವಲನ ನಡೆಯಿತು. ಗುರಿಕಾರರು ಹಾಗೂ ಕ್ಷೇತ್ರದ ಆಡಳಿತ ಮಂಡಳಿ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.
ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಂಕಲ್ಪ ನಡೆದು, ಶೋಡಷ ಉಪಚಾರ ಸೇವೆ, ಶ್ರೀ ಲಕ್ಷ್ಮೀ ಅಷ್ಟೋತ್ತರ, ಶ್ರೀ ಲಕ್ಷ್ಮೀ ಅಷ್ಟಕ, ಸಾಮೂಹಿಕ ಕುಂಕುಮಾರ್ಚನೆ ನಡೆದು ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನೆರವೇರಿತು.


