Thursday, November 21, 2024
Flats for sale
Homeಜಿಲ್ಲೆಮಂಗಳೂರು ; ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ವ್ಯವಸ್ಥಾಪನ ಸಮಿತಿಯಲ್ಲಿ ಕನಿಷ್ಠ ಒಂದು ಸದಸ್ಯತ್ವವನ್ನು ಮಿಸಲಾತಿಗೆ...

ಮಂಗಳೂರು ; ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ವ್ಯವಸ್ಥಾಪನ ಸಮಿತಿಯಲ್ಲಿ ಕನಿಷ್ಠ ಒಂದು ಸದಸ್ಯತ್ವವನ್ನು ಮಿಸಲಾತಿಗೆ ಮಲೆಕುಡಿಯ ಸಮುದಾಯ ಬೇಡಿಕೆ…!

ಮಂಗಳೂರು ; ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನವು ಪ್ರಸಿದ್ಧ ಕ್ಷೇತ್ರವಾಗಿ ನಾಡಿನೆಲ್ಲೆಡೆ ಚಿರಪರಿಚಿತವಾಗಿದೆ. ನಾಗದೇವರ ಮೂಲ ಅರಾಧನಾ ಸ್ಥಳವಾಗಿದ್ದು ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯ ಸಮುದಾಯಕ್ಕೆ ಸೇರಿರುವ ದೇವಸ್ಥಾನವೆಂಬ ಹಿನ್ನೆಲೆಯನ್ನು ಹೊಂದಿದೆ.ನಮ್ಮ ಮಲೆಕುಡಿಯ ಸಮುದಾಯದ ಕುಕ್ಕೆ ಮತ್ತು ಲಿಂಗ ಎನ್ನುವ ಹೆಸರಿನ ಇಬ್ಬರು ವ್ಯಕ್ತಿಗಳು ಈ ಶ್ರೀ ಕ್ಷೇತ್ರದ ಸ್ಥಾಪನೆಗೆ ಕಾರಣಕರ್ತರಾಗಿರುತ್ತಾರೆ.ಕಾಲಾನಂತರದಲ್ಲಿ ದೇವಸ್ಥಾನವು ಸರಕಾರದ ಆಡಳಿತಕ್ಕೋಳಪಟ್ಟು ಉತ್ತಮ ರೀತಿಯಲ್ಲಿ ನಿರ್ವಹಣೆಗೊಂಡು ಮುನ್ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈ ಬಾರಿ 150 ಮಂದಿ ಅರ್ಜಿಸಲ್ಲಿಸಿದ್ದು ಖಾಯಂ ಆಗಿ ಮಲೆಕುಡಿಯರಿಗೆ ಎರಡು ಸ್ಥಾನ ಕೊಡಬೇಕೆಂದು ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ ಸಂಘ ಒತ್ತಾಯಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಮಲೆಕುಡಿಯ ಸಮುದಾಯಕ್ಕೂ ಅವಿನಾಭಾವ ನಂಟು ಇರುವುದನ್ನು ನಾವು ಕಾಣಬಹುದು ದೇವಸ್ಥಾನ ದ ಪೂಜಾ ಕೈಂಕರ್ಯಗಳು ನೆರವೇರುವಲ್ಲಿ ಮಲೆಕುಡಿಯರ ಪಾತ್ರ ಮಹತಗವದಾಗಿದೆ. ಶ್ರೀ ಕ್ಷೇತ್ರದ ದೇವರ ಪರಿಚಾರಕ ವೃತ್ತಿ ( ಬುಟ್ಟಿ ಚಾಕರಿ) ಯಿಂದ ಹಿಡಿದು ,ಉತ್ಸವ ಕಾರ್ಯಗಳು ಸಾಂಗೋಪವಾಗಿ ನೇರವೆರಲು ಮಲೆಕುಡಿಯರು ನಾನಾ ರೀತಿಯಲ್ಲಿ ಶ್ರಮ ಪಡುತ್ತಾರೆ. ದೈವದ ನೇಮೋತ್ಸವ ಕಾರ್ಯಕ್ರಮ ದಲ್ಲಿ ಮಲೆಕುಡಿಯರ ಪಾತ್ರ ಪ್ರಮುಖವಾಗಿದೆ. ಅಷ್ಟಮಿಯಂದು ಶ್ರೀ ದೇವಳದ ವತಿಯಿಂದ ನಡೆಯುವ ಪಲ್ಲಕ್ಕಿ ಉತ್ಸಾಹವನ್ನು ನೆರವೇರಿದುವದೆ ನಮ್ಮ ಸಮುದಾಯದವರು .ಮುಖ್ಯವಾಗಿ ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಸಮಯದಲ್ಲಿ ದೇವರ ಬ್ರಹ್ಮರಥವನ್ನು ಕಟ್ಟುವ ಕಾರ್ಯ ವನ್ನು ಮಲೆಕುಡಿಯರೇ ನಿರ್ವಹಿಸುತ್ತಿದ್ದು ಈ ಕುರಿತಾದ ಕಟ್ಟು ಕಟ್ಟಳೆಗಳನ್ನು ಅನೂಚನಾಗಿ ನಮ್ಮ ಸಮುದಾಯದವರು ಪಾಲಿಸಿ ಕೊಂಡು ಬಂದಿರುತ್ತಾರೆ. ಧಾರ್ಮಿಕ ವಿಧಿ ವಿಧಾನ ವಾದ ಅಷ್ಟಮಂಗಳದಲ್ಲಿಯೂ ಈ ಸಂಬಧವಾಗಿ ಅನೇಕ ವಿಚಾರಗಳು ಪ್ರಸ್ತಾಪವಾಗಿದ್ದು ಮೂಲ ನಿವಾಸಿಗಳಾದ ಮಲೆಕುಡಿಯರ ಮತ್ತು ದೆವಸ್ಥಾನಕ್ಕೆ ಪರಂಪರಗತವಾಗಿ ಇರುವ ಬಾಂಧವ್ಯವನ್ನು ತಿಳಿಸುತ್ತದೆ. ಶ್ರೀ ದೇವರ ಸೇವೆಯಲ್ಲದೆ ಕ್ಷೇತ್ರದ ವಿವಿಧ ವಿಭಾಗದಲ್ಲಿ ಮಲೆಕುಡಿಯರು ದುಡಿಯುತ್ತಾರೆ .ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಇದುವರೆಗೂ ಈ ಹಿಂದೆ ಕಾರ್ಯನಿರ್ವಹಿಸಿದ ಸಮಿತಿಗಳಲ್ಲಿ ಮಲೆಕುಡಿಯರಿಗೆ ಕನಿಷ್ಠ ಒಂದು ಸದಸ್ಯತ್ವ ಸ್ಥಾನವನ್ನು ಕಾಯ್ದಿರಿಸುವುದು ಜೊತೆಗೆ ಮೀಸಲಿಡಲಾಗಿತ್ತು ಎಂದು ಹೇಳಿದ್ದಾರೆ.

ಹಾಗಾಗಿ ಇದೀಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕ್ಕೆ ವ್ಯವಸ್ಥಾಪನ ಸಮಿತಿ ರಚನೆ ಮಾಡುವ ಕುರಿತು ಮಾನ್ಯ ಮುಜರಾಯಿ ಇಲಾಖೆಯ ವತಿಯಿಂದ ಅರ್ಜಿಯನ್ನು ಅಹ್ವಾನಿಸಿರುತ್ತಾರೆ. ಈ ಬಾರಿಯೂ ರಚನೆಗೊಳ್ಳಲಿರುವ ವ್ಯವಸ್ಥಾಪನ ಸಮಿತಿಯಲ್ಲಿ ಕನಿಷ್ಠ ಒಂದು ಸದಸ್ಯತ್ವವನ್ನು ಮಲೆಕುಯರಿಗೆ ಮೀಸಲಿಡುವಂತೆ ತಮ್ಮಲ್ಲಿ ವಿನಂತಿಸುತ್ತೆವೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಸೂಚನೆ ಯಲ್ಲಿ ಉಲ್ಲೇಖಿಸಬೇಕೆಂದೂ ಈ ಸರ್ವ ಮಲೆಕುಡಿಯರ ಪರವಾಗಿ ಕೇಳಿಕೊಳ್ಳುತ್ತೆವೆಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ್ ಗೌಡ, ವಸಂತಿ ನೆಲ್ಲಿಕಾಡು ,ಜಯರಾಂ ಆಲಂಗಾರು,ನೋಣಯ್ಯ ,ಹರೀಶ್ ಎಳನೀರು,ಗಂಗಾಧರ ಗೌಡ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular