ಮಂಗಳೂರು ; ಖ್ಯಾತ ಉದ್ಯಮಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಬೋಳೂರು ವಾರ್ಡಿನ ಬಿ.ಜೆ.ಪಿ ಪಕ್ಷದ ಪಾಲಿಕೆಯ ಸದಸ್ಯ ಜಗದೀಶ್ ಶೆಟ್ಟಿಯವರು ಅತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಇಂದು ಸಂಜೆಯ ವೇಳೆ ಮಂಗಳೂರಿನ ಹೋಟೇಲೊಂದರ ಮುಂಭಾಗದಲ್ಲಿ ಕಾರಿನಲ್ಲಿ ಕುಳಿತು ಜಗದೀಶ್ ಶೆಟ್ಟಿ ವಿಷ ಸೇವನೆ ಮಾಡಿದ್ದಾರೆ. ವಿಷ ಸೇವಿಸಿದ ಕೆಲವೇ ಕ್ಷಣದಲ್ಲಿ ಒದ್ದಾಡಲು ಶುರು ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಅವರನ್ನು ನೋಡಿದ ಸಾರ್ವಜನಿಕರು ತಕ್ಷಣ ಅವರನ್ನು ಕಾರಿನಿಂದ ಹೊರತೆಗೆದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಹಿತಿಯ ಪ್ರಕಾರ ವ್ಯವಹಾರ ಹಾಗೂ ಸಹಪಾಠಿಗಳಿಗೆ ಕೋಟಿಗಟ್ಟಲೆ ಹಣದ ವ್ಯವಹಾರಕ್ಕೆ ಇವರು ಸಾಕ್ಷಿಯಾಗಿದ್ದರು ಎಂಬುದು ಬಲ್ಲ ಮೂಲಗಳಿಂದ ಮಾಹಿತಿ,ಅರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲದ ಇವರು ಎಲ್ಲರ ಜೋತೆಯಲ್ಲಿ ವ್ಯವಹಾರ ಮಾಡುತ್ತಿದ್ದು, ಸಾನಿಧ್ಯ ಸಂಸ್ಥೆಯ ಆಡಳಿತದಲ್ಲೂ ಇದ್ದರು. ಗಂಭೀರ ಸ್ಥಿತಿಯಲ್ಲಿರುವ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


