ಮಂಗಳೂರು : ಕರ್ನಾಟಕ ಪತ್ರಕರ್ತರ ಒಕ್ಕೂಟದ ದಕ್ಷಿಣ ಕನ್ನಡ ಸಮಿತಿಯ ನೂತನ ಅಧ್ಯಕ್ಷರಾಗಿ ತಾರಾನಾಥ್ ಗಟ್ಟಿ ಕಾಪಿಕಾಡ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕ್ಯಾನುಟ್ ಪಿಂಟೋ ಮತ್ತು ಖಜಾಂಚಿಯಾಗಿ ಗಿರಿಧರ್ ಶೆಟ್ಟಿ ನೇಮಕಗೊಂಡಿದ್ದಾರೆ. ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾಗಿ ಹರೀಶ್ ಬಂಟ್ವಾಳ್, ಗೌರವ ಸಲಹೆಗಾರರಾಗಿ ರಿಚರ್ಡ್ ಲಸ್ರಾದೋ ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ವಿಟ್ಲ, ಉಪಾಧ್ಯಕ್ಷರಾಗಿ ಲಕ್ಷ್ಮಣ ಕುಂದರ್, ಮಂದಾರ ರಾಜೇಶ್ ಭಟ್, ಶರೀಫ್ ಜಟ್ಟಿಪಳ್ಳ, ಜ್ಯೋತಿ ಪ್ರಕಾಶ್ ಪುಣಚ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಪೂಜಾಶ್ರೀ ವಿತೇಶ್ ಕೋಡಿ, ಹೇಮಾ ಜಯರಾಮ ರೈ, ಗಣೇಶ್ ಕುಕ್ಕುದಾಡಿ, ಸದಸ್ಯತ್ವ ಅಭಿಯಾನ ಸಂಘಟಕರಾಗಿ ಈಶ್ವರ ವಾರಣಾಶಿ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲ್ ಅಂಚನ್, ಶಿವಪ್ರಸಾದ್ ಆಲೇಟಿ, ರಾಮದಾಸ್ ವಿಟ್ಲ, ಯಶವಿತ್ ಕಲ್ಮನೆ, ಜಯಶ್ರೀ ಕೊಯಿಂಗೋಡಿ, ಶ್ರೀಧರ್ ಕಜೆಗದ್ದೆ, ರಮೇಶ್ ಪೆರ್ಲ, ಡೊನಾಲ್ಡ್ ಪಿರೇರಾ, ರಮೇಶ್ ನೀರಬಿದಿರೆ, ವಿನಯ್ ಜಾಲ್ಸೂರು, ಕೆ.ಟಿ. ಬಗೀಶ್ ಕೊಯಿಕುಳಿ, ವಿನಯ್ ಕಲ್ಲಡ್ಕ, ಕುಶಾಂತ್ ಕೊರಟ್ಯಡ್ಕ, ದಾನರಾಜ್, ಅನುಷ್ ಪಂಡಿತ್, ರಮ್ಯಾ ಸತೀಶ್ ಕಳಂಜ, ರೇಖಾ ಸುಭಾಷ್, ಫ್ಲಾಯ್ಡ್ ಜೀವನ್ ಫೆರ್ನಾಂಡಿಸ್, ಶಿವಪ್ರಸಾದ್ ಆಲೆಟ್ಟಿ, ರಾಮದಾಸ್ ವಿಟ್ಲ, ಅಶ್ವಿತ್ ಸುಳ್ಯ ಆಯ್ಕೆಯಾಗಿದ್ದಾರೆ.