Thursday, March 12, 2026
Flats for sale
Homeಜಿಲ್ಲೆಮಂಗಳೂರು : ಕದ್ರಿ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಮಂಜುನಾಥ ಫ್ರೆಂಡ್ಸ್‌ ಸರ್ಕಲ್‌ ನ ವತಿಯಿಂದ...

ಮಂಗಳೂರು : ಕದ್ರಿ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಮಂಜುನಾಥ ಫ್ರೆಂಡ್ಸ್‌ ಸರ್ಕಲ್‌ ನ ವತಿಯಿಂದ 24 ನೇ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ..!

ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಕದ್ರಿ ಮುಂಡಾಣ ಕಟ್ಟೆಯಲ್ಲಿ ದೇವರ ಬಲಿ ಉತ್ಸವ ಪೂಜೆಯು ಜನವರಿ 18 ರಂದು ಶನಿವಾರ ಸಂಜೆ ನಡೆದಿದ್ದು, ಈ ಸಂದರ್ಭದಲ್ಲಿ ಕದ್ರಿ ಹಿಲ್ಸ್‌ ಆಕಾಶವಾಣಿ ಬಳಿಯ ಸಂಪಿಗೆ ಕಟ್ಟೆ ಶ್ರೀ ಮಂಜುನಾಥ ಫ್ರೆಂಡ್ಸ್‌ ಸರ್ಕಲ್‌ ನ 24 ನೇ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಮ್ಮ ಕಲಾವಿದೆರ್‌ ಕುಡ್ಲ ವತಿಯಿಂದ ‘ಅಮ್ಮೆರ್’ ಎಂಬ ತುಳು ಹಾಸ್ಯ ನಾಟಕ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್‌, ಸ್ಥಳೀಯ ಕಾರ್ಪೊರೇಟರ್‌ ಶಕೀಲಾ ಕಾವ, ಡಿಂಕಿ ಡೈನ್‌ ಮಾಲಕ ಸ್ವರ್ಣ ಸುಂದರ್, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಸೂರಜ್ ಕುಮಾರ್‌ ಕಲ್ಯ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಂದರ ರೈ ಮಂದಾರ ಮತ್ತು ಮಂಗಳೂರು ಮೀನಾನಾಥ ಖ್ಯಾತಿಯ ರಾಘವೇಂದ್ರ ರೈ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ್ ಫ್ರೆಂಡ್ ಸರ್ಕಲ್ ನ ಅಧ್ಯಕ್ಷ ಶ್ರೀಧರ ಸಾಲ್ಯಾನ್‌ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೃಷ್ಣ ಜೆ. ಪಾಲೆಮಾರ್‌ ಮಾತಮಾಡಿ ಮಂಜುನಾಥ ಫ್ರೆಂಡ್ಸ್‌ ಸರ್ಕಲ್‌ ಕಳೆದ 24 ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಜನರಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದೆ. ಇದರ ಕಾರ್ಯವೈಖರಿ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡುವಂತಾಗಲಿ ಎಂದು ಹಾರೈಸಿದರು. ಶಕೀಲಾ ಕಾವ ಅವರು ಮಾತನಾಡಿ ಮಂಜುನಾಥ ಫ್ರೆಂಡ್ಸ್‌ ಸರ್ಕಲ್‌ ಕಳೆದ 24 ವರ್ಷಗಳಿಂದ ಸಲ್ಲಿಸಿರುವ ಸೇವೆ ಅಸಾಧಾರಣ ಎಂದು ಅಭಿನಂದಿಸಿ ಶುಭ ಕೋರಿದರು.

RELATED ARTICLES

LEAVE A REPLY

Please enter your comment!
Please enter your name here

Most Popular