ಮಂಗಳೂರು : ರಸ್ತೆ ದಾಟುವ ವೇಳೆ ಡಿಕ್ಕಿಹೊಡೆದು ತಾಯಿಯ ಮೇಲೆ ಮಗುಚಿ ಬಿದ್ದ ಆಟೋರಿಕ್ಷಾ, ಕಣ್ಣ ಮುಂದೆ ಒದ್ದಾಡುತ್ತಿದ್ದ ಅಮ್ಮನ ಉಳಿಸಲು ಗಾಡಿಯನ್ನೇ ಎತ್ತಿದ ಬಾಲಕಿ,ವಿಡಿಯೋ ವೈರಲ್ ,ಬಾಲಕಿಯ ಧೈರ್ಯ ಕ್ಕೆ ಸಿ.ಎಂ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.
ಮಹಿಳೆ ರಸ್ತೆಯಲ್ಲಿ ಆಟೋರಿಕ್ಷಾ ಬರುವವೇಳೆ ಗಮನಿಸದೆ ತಟ್ಟನೆ ರಸ್ತೆ ದಾಟುತ್ತಿರುವಾಗ ಆಟೋರಿಕ್ಷಾ ಡಿಕ್ಕಿ ಹೊಡೆದು ಮಗುಚಿ ಮಹಿಳೆ ಮೇಲೆ ಬಿದ್ದ ಘಟನೆ ನಾಲ್ಕು ದಿನಗಳ ಹಿಂದೆ ಮಂಗಳೂರಿನ ಕಿನ್ನಿಗೋಳಿಯ ರಾಮನಗರದಲ್ಲಿ ವರದಿಯಾಗಿತ್ತು.ಆದರೆ ಅಪಘಾತದಲ್ಲಿ ತಾಯಿ ಮೇಲೆ ಬಿದ್ದ ಆಟೋವನ್ನು ಪುಟ್ಟ ಬಾಲಕಿಯೊಬ್ಬಳು ಎತ್ತಿ ಹಾಕಿರುವ ವಿಡಿಯೋ ವೈರಲ್ ಆಗಿದ್ದು ಬಾಲಕಿಯ ದೈರ್ಯಕ್ಕೆ ಎಲ್ಲೆಡೆ ಪ್ರಶಂಶೆ ವ್ಯಕ್ತವಾಗಿದೆ.
ಪಿಗ್ಮಿ ಕಲೆಕ್ಷನ್ ಮುಗಿಸಿ ಟ್ಯೂಶನ್ ಗೆ ತೆರಳಿದ್ದ ಮಗಳನ್ನು ಕರೆತರಲು ಟ್ಯೂಶನ್ ಸೆಂಟರ್ ಬಳಿ ಬಂದ ಚೇತನಾ ಏಕಾಏಕಿ ರಸ್ತೆ ದಾಟಲು ಕಿನ್ನಿಗೋಳಿಯ ರಾಮನಗರದಲ್ಲಿ ಮಹಿಳೆ ರಸ್ತೆ ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ ಆಟೋ ನಿಯಂತ್ರಣ ತಪ್ಪಿ ಮಹಿಳೆ ಗುದ್ದಿದೆ. ಅಲ್ಲದೆ ಆಕೆಯ ಮೇಲೆ ಉರುಳಿದೆ. ಈ ವೇಳೆ ರಾಜರತ್ನಪುರ ನಿವಾಸಿ ಚೇತನಾ (35 ವರ್ಷ)ಎನ್ನುವ ಮಹಿಳೆಗೆ ತೀವ್ರಗಾಯವಾಗಿದೆ.ಇದನ್ನು ಕಂಡ ಬಾಲಕಿ ಓಡಿ ಬಂದಿದ್ದು, ತಕ್ಷಣ ಆಟೋವನ್ನೇ ಮೇಲೆಕ್ಕೆ ಎತ್ತಿ ಹಾಕಿದ್ದಾಳೆ. ಇವಿಷ್ಟೂ ದೃಶ್ಯವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಇದೀಗ ಮುಖ್ಯಮಂತ್ರಿ ಸಿದ್ದ ರಾಮಯ್ಯ ತಮ್ಮ x ಖಾತೆ ಹಾಗೂ FACE BOOk ಖಾತೆಯಲ್ಲಿ ಮನವೀಯತೆ ಮೆರಯದಿರಲಿ ಎಂದು ಟ್ವಿಟ್ ಮಾಡಿದ್ದು
ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಆಟೋವೊಂದು ಡಿಕ್ಕಿ ಹೊಡೆದಿದೆ, ಅಲ್ಲೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಯಾರ ಸಹಾಯಕ್ಕೂ ಕಾಯದೆ, ತಕ್ಷಣ ಕಾರ್ಯಪ್ರವೃತ್ತಳಾಗಿ ಆಟೋವನ್ನು ಎತ್ತಿ ಮಹಿಳೆಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಬಾಲಕಿಯ ಸಮಯಪ್ರಜ್ಞೆ, ಧೈರ್ಯ ಶ್ಲಾಘನೀಯ.
ಇತ್ತೀಚಿನ ದಿನಗಳಲ್ಲಿ ಅಪಘಾತ ಸಂಭವಿಸಿದ ಸ್ಥಳಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಜನರು ಸುತ್ತಲೂ ನಿಂತು ಮೊಬೈಲ್ ಮೂಲಕ ವೀಡಿಯೋ ಮಾಡುವುದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ಕಂಡಿದ್ದೆ, ಇದು ಭವಿಷ್ಯದ ದಿನಗಳ ಬಗ್ಗೆ ನನ್ನಲ್ಲಿ ಆತಂಕವನ್ನೂ ಮೂಡಿಸಿತ್ತು. ಈ ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ರವಾನಿಸಿದಂತಿದೆ. ಅಪಘಾತ, ಬೆಂಕಿ ಅನಾಹುತ, ಹೃದಯಾಘಾತ ಇಂತಹ ತುರ್ತು ಸಂದರ್ಭದಲ್ಲಿ ಸಂತ್ರಸ್ತರ ಪಾಲಿಗೆ ಪ್ರತಿ ಸೆಕೆಂಡ್ ಕೂಡ ಅಮೂಲ್ಯ. ಈ ವೇಳೆ ಮಾನವೀಯತೆ ಮರೆಯದಿರಿ. ಎಂದು ಸಾಮಾಜಿಕಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.