ಮಂಗಳೂರು : ಕುಲಾ ಪ್ರತಿಷ್ಠಾನ (ರಿ) ಮಂಗಳೂರು ವತಿಯಿಂದ ಇದೇ ತಿಂಗಳ ಎಪ್ರಿಲ್ 13 ರಂದು ರವಿವಾರ ಉರ್ವಸ್ಟೋರ್ ಬಳಿಯ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರೇಮಾನಂದ ಕುಲಾಲ್ ತಿಳಿಸಿದ್ದಾರೆ.
ದಿ.ಸುಮಿತ್ರ ರಾಜು ಸಾಲ್ಯಾನ್ ವೇದಿಕೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಉಧ್ಘಾಟನೆ ನಡೆಯಲಿದ್ದು ಶ್ರೀ ಶ್ರೀ ಮೋಹನದಾಸ ಪರಮಹಂಸ ಶ್ರೀ ಧಾಮ ಮಾಣಿಲ ಸ್ವಾಮೀಜಿಯವರು ನೆರೆವೆರಿಸುವರು,ಅಧ್ಯಕ್ಷತೆಯನ್ನು ಸುರೇಶ್ ಕುಲಾಲ್ ಮಂಗಳಾದೇವಿ ವಹಿಸಲಿದ್ದು ಗೌರವ ಉಪಸ್ಥಿತಿಯಲ್ಲಿ ಶ್ರೀ ಶಿವನಂದ ಕನಡ,ಎಂ.ಪಿ ಬಂಗೇರ,ಮಮತಾ ಅಣ್ಣಯ್ಯ ಕುಲಾಲ್,ಸದಾಶಿವ ಕುಲಾಲ್ ಹಾಗೂ ಇನ್ನಿತರರು ಉಪಸ್ಥಿತರಿರುವರು.
ಮಧ್ಯಹ್ನ 2 ರಿಂದ ಅಮಿತ ಜತಿನ್ ಮೂಲ್ಯ ಮತ್ತು ತಂಡದಿಂದ, ಗೀತಾ ಸಾಲ್ಯಾನ್ ತಂಡದಿಂದ,ಸವಿತಾ ಜೀವನ್ ತಂಡದಿಂದ ನೃತ್ಯ-ಸಂಗೀತ – ಸನ್ಮಾನ ಹಾಗೂ ಪ್ರತಿಭಾವಂತ ಕುಲಾಲ ಸಮಾಜದ ಮಕ್ಕಳಿಂದ ವೈವಿಧ್ಯಮಯ ನೃತ್ಯ ವೈಭವ ನಡೆಯಲಿದೆ.
ದಿ.ಎಂ ಕೆ ಸೀತಾರಾಮ್ ಕುಲಾಲ್ ರಚಿಸಿರುವ ತುಳುಗೀತೆಗಳನ್ನು ಪ್ರಸಿದ್ಧ ಕಲಾವಿದ ಗಣೇಶ್ ಎರ್ಮಾಳ್ ರವರು ಹಾಡಿ ರಂಜಿಸಲಿದ್ದಾರೆ.ಕುಲಾಲ ಸಮಾಜದ 25 ಸಾಧಕರಿಗೆ ಕುಲಾಲ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಿದೆ.
ಸಮಾರೋಪ ಸಮಾರಂಭವನ್ನು ಸಂಜೆ 6.30 ಗಂಟೆಗೆ ವಿಜಯ ಸುವರ್ಣ ಮಾದುಕೋಡಿ,ಸುನೀಲ್ ಸಾಲ್ಯಾನ್, ಐಕಳ ಹರೀಶ್ ಶೆಟ್ಟಿ ಯವರು ಹಾಗೂ ಇನ್ನಿತರರ ಉಪಸ್ಥಿತಿಯಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ 25 ಕುಲಾಲ ಸಮಾಜದ ಭಾಂದವರಿಗೆ ಆರ್ಥಿಕ ಸಹಾಯ ನಡೆಯಲಿದೆ, ಹಾಗೂ 8.30 ರಿಂದ ನಾಗೇಶ್ ಕುಲಾಲ್ ಸಾರಥ್ಯದಲ್ಲಿ “ಮಣ್ಣಾ ಬಾಜನ ” ಕಿರುನಾಟಕ ಹಾಗೂ ಸೀತಾರಾಮ್ ಕುಲಾಲ್ ತಂಡದಿಂದ ” ತಾಲೀಮು ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಲಾಲ ಪ್ರತಿಷ್ಠಾನ ದ ಅಧ್ಯಕ್ಷ ಸುರೇಶ್ ಕುಲಾಲ್, ನಾಗೇಶ್ ಕುಲಾಲ್,ದಿನೇಶ್ ಕುಲಾಲ್,ಸೀತಾರಾಮ ಕುಲಾಲ್ ರವರು ಉಪಸ್ಥಿತರಿದ್ದರು.