Saturday, January 17, 2026
Flats for sale
Homeಜಿಲ್ಲೆಮಂಗಳೂರು ; ಎದೆ ನೋವಿನಿಂದ ಬಳಲುತ್ತಿದ್ದ ವಿಧ್ಯಾರ್ಥಿಯನ್ನು ಕೇವಲ 6 ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪಿಸಿ ಪ್ರಾಣ...

ಮಂಗಳೂರು ; ಎದೆ ನೋವಿನಿಂದ ಬಳಲುತ್ತಿದ್ದ ವಿಧ್ಯಾರ್ಥಿಯನ್ನು ಕೇವಲ 6 ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪಿಸಿ ಪ್ರಾಣ ಉಳಿಸಿದ 13 ನಂಬರ್ ಬಸ್ ನ ಚಾಲಕ – ನಿರ್ವಾಹಕ !

ಮಂಗಳೂರು ; ಬಸ್ಸನ್ನು ತುರ್ತಾಗಿ ಆಂಬ್ಯೂಲೆನ್ಸ್ ತರಹ ಆಸ್ಪತ್ರೆ ಒಳಗೆ ನುಗ್ಗಿಸಿ ಎದೆನೋವಿನಿಂದ ವಿಧ್ಯಾರ್ಥಿಯ ಪ್ರಾಣ ಉಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕರಾವಳಿಯ ಪ್ರಯಾಣಿಕರ ಮೆಚ್ಚುಗೆ ಗಳಿಸಿದ ಶ್ರಮಿಕರುವೆಂದು ಸಾಜಾಜಿಕ ಜಾಲತಾಣದಲ್ಲಿ ಚಾಲಕ ಹಾಗೂ ನಿರ್ವಾಹಕರಿಗೆ ಪ್ರಶಂಸೆಯ ಮಹಾಪೂರ ಹರಿದುಬಂದಿದೆ.

13F ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ಸು ಎಂದಿನಂತೆ ಕುಳೂರು ಮಾರ್ಗವಾಗಿ ಚಲಿಸುತಿತ್ತು. ಅದರಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರಲ್ಲಿ ಕಾಲೇಜು ವಿದ್ಯಾರ್ಥಿ ತಟ್ಟನೆ ಎದೆ ನೋವೆಂದು ಹಾರ್ಟ್ ಅಟ್ಯಾಕ್ ನ ಸೂಚನೆ ನೀಡುತ್ತಿದ್ದಂತೆ ಎಚೆತ್ತು ಗೊಂಡ ಬಸ್ಸಿನ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದರ್ ಹಾಗು ಮಹೇಶ್ ಪೂಜಾರಿ ಸುರೇಶ್ ತಟ್ಟನೆ ಏನನ್ನು ಆಲೋಚಿಸದೆ ಎಲ್ಲಾ ಪ್ರಯಾಣಿಕರನ್ನು ಹೊತ್ತುಕೊಂಡು ಆಂಬುಲೆನ್ಸ್ ಮಾದರಿಯಲ್ಲಿ ಸೈರಾನ್ ಹಾಕಿಕೊಂಡು 6 km ದೂರವನ್ನು 6ನಿಮಿಷಗಳಲ್ಲಿ ಪ್ರಯಾಣಿಸಿ ನಗರದ ಕಂಕನಾಡಿ ಆಸ್ಪತ್ರೆಯ ಹೊರಗಣವನ್ನು ಯಾರ ಅಪ್ಪಣೆಯನ್ನು ಕೇಳದೆ ಪ್ರಾಮುಖ್ಯತೆ ಯನ್ನು ಅರಿತು ಒಳ ಪ್ರವೇಶಿಸಿ ವಿದ್ಯಾರ್ಥಿ ಯನ್ನು ತುರ್ತುನಿಗಾಕ್ಕೆ ಕ್ಲಪ್ತ ಸಮಯದಲ್ಲಿ ಸೇರಿಸಿ ಜೀವ ಉಳಿಸಿದ್ದಾರೆ. ಈ ಕೆಲಸ ನೋಡುತ್ತಿದ್ದ ಸಾರ್ವಜನಿಕರನ್ನು ಮೂಕ ವಿಸ್ಮಯರನ್ನಾಗಿಸಿದ್ದು ಇವರ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಕರಾವಳಿಯಲ್ಲಿ ಬಸ್ಸು ಚಾಲಕ ನಿರ್ವಹಕ ಶ್ರಮಿಕ ವರ್ಗ ಮಾನವೀಯತೆ ಯ ಆಗರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular