Tuesday, February 4, 2025
Flats for sale
Homeಜಿಲ್ಲೆಮಂಗಳೂರು ; ಆಕೃತಿ ಪಬ್ಲಿಕೇಶನ್ ಆಶ್ರಯದಲ್ಲಿ ದಾ.ನ ಉಮಾಣ್ಣರವರ "ಅರದೆರ್ ಬಿರ್‍ದೆರ್" ಕೃತಿ ಬಿಡುಗಡೆ…!

ಮಂಗಳೂರು ; ಆಕೃತಿ ಪಬ್ಲಿಕೇಶನ್ ಆಶ್ರಯದಲ್ಲಿ ದಾ.ನ ಉಮಾಣ್ಣರವರ “ಅರದೆರ್ ಬಿರ್‍ದೆರ್” ಕೃತಿ ಬಿಡುಗಡೆ…!

ಮಂಗಳೂರು : ಆಕೃತಿ ಆಶಯ ಪಬ್ಲಿಕೇಶನ್ ಆಶ್ರಯದಲ್ಲಿ ದಾ.ನ ಉಮಾಣ್ಣ ರವರ ಅದರೆರ್ ಬಿರ್ ದೆರ್ ಪುಸ್ತಕ ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಿದರು.

ಅರದೆರ್ ಬಿರ್‍ದೆರ್ ಕೃತಿಯಲ್ಲಿ ತುಳುನಾಡಿನ ಜನಪದ ಅಧ್ಯಯನ ಅಡಕವಾಗಿದೆ. ಕೃತಿಕಾರರು ನಲಿಕೆ ಸಮುದಾಯಕ್ಕೆ ಸೇರಿದ ಕಾರಣದಿಂದ ಕೃತಿಯಲ್ಲಿರುವ ವಿಚಾರಗಳಿಗೆ ಹೆಚ್ಚು ಅಧಿಕೃತತೆ ಪ್ರಾಪ್ತಿಯಾಗಿದೆ ಎಂದು ಹಿರಿಯ ಸಾಹಿತಿ ಡಾ.ವಸಂತಕುಮಾರ್ ಪೆರ್ಲ ಹೇಳಿದರು.

ಅವರು ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕೃತಿ ಆಶಯ ಪಬ್ಲಿಕೇಶನ್ ಆಶ್ರಯದಲ್ಲಿ ದಾ.ನ.ಉಮಾಣ್ಣ ಅವರ `ಅರದೆರ್ ಬಿರ್‍ದೆರ್’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಈ ಕೃತಿಯಲ್ಲಿ ತುಳುನಾಡಿನ ಸಂಸ್ಕøತಿಯ ಪರಿಚಯದ ಜತೆಯಲ್ಲಿ ಅಧ್ಯಯನಕ್ಕೆ ಪೂರಕವಾದ ವಿಚಾರಗಳು ಅಡಕವಾಗಿದೆ. ಜಾನಪದ ಕಥನಗಳ ವಿಶ್ಲೇಷಣೆ ಮಾಡುವ ಮೂಲಕ ಇದೊಂದು ಅಧ್ಯಯನ ಯೋಗ್ಯವಾದ ಕೃತಿ ಎಂದರು.

ಈ ಸಂದರ್ಭ ಕೃತಿಯ ಕುರಿತು ಸಾಹಿತಿ ರಘು ಇಡ್ಕಿದು ಮಾತನಾಡಿ, ಕೃತಿಯಲ್ಲಿ ತುಳುವಿನ ಆರಾಧನೆ ಪರಂಪರೆಯ ಜತೆಗೆ ಸಂಸ್ಕøತಿಯ ವಿಚಾರಗಳನ್ನು ತನ್ನ ಅಧ್ಯಯನ ದೃಷ್ಟಿಕೋನದಿಂದ ಕಂಡು ವಿಶ್ಲೇಷಣೆ ಮಾಡುವ ಪ್ರಯತ್ನ ಇಲ್ಲಿ ಸಾಗಿದ್ದು, ಕೃತಿಯ ಮೂಲಕ ಹೊಸ ಮೌಲ್ಯದ ಅನಾವರಣವಾಗಿದೆ ಎಂದರು. ಈ ಸಂದರ್ಭ ಕೃತಿಕಾರ ದಾ.ನ.ಉಮಾಣ್ಣ, ಅವರ ಧರ್ಮಪತ್ನಿ ಜ್ಯೋತಿ ಉಮಾಣ್ಣ ಹಾಗೂ ಎನ್. ಸುಬ್ರಾಯ ಭಟ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular