ಮಂಗಳೂರು : ಹಿಂದುಗಳಿಗೆ ಅಸ್ತಿತ್ವ ಇಲ್ಲ. ಭಾರತದಲ್ಲಿ ಮಾತ್ರ ಹಿಂದುಗಳಿದ್ದಾರೆ. ಹಿಂದುಗಳ ಹುಟ್ಟು ಎಲ್ಲಿಂದಲೇ ಇವರಿಗೆ ತಿಳಿದಿಲ್ಲ. ಅಯೋಧ್ಯೆಯಲ್ಲಿ ಕಲ್ಲಿನ ಮೂರ್ತಿ ಮಾಡಿ ಇಟ್ಟ ಕೂಡಲೇ ಅಲ್ಲಿಗೆ ರಾಮ ಬರುತ್ತಾನೆಯೇ..? ಮಸೀದಿಯನ್ನು ಒಡೆದು ಡೆಕೋರೇಶನ್ ಮಾಡಿ ಮಂದಿರ ಕಟ್ಟಬೇಕಿತ್ತೇ.? ರಾಮಾಯಣ, ರಾಮ ಎಲ್ಲ ಕಾಲ್ಪನಿಕ. ಅದನ್ನು ಹೇಗೆ ನಂಬುತ್ತೀರಿ ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಮಕ್ಕಳಲ್ಲಿ ಹಿಂದು ಧರ್ಮದ ಬಗ್ಗೆ ಅಪನಂಬಿಕೆ ಬರುವ ರೀತಿ ಮಾಡಿದ್ದಾರೆಂದು ಪೋಷಕರೊಬ್ಬರು ಆರೋಪಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ವೇದವ್ಯಾಸ್ ಕಾಮತ್ ,ಮಕ್ಕಳ ಪೋಷಕರು,ಹಿಂದೂ ಸಂಘಟನೆಯ ಕಾರ್ಯಕರ್ತರು ದೌಡಾಹಿಸಿದ್ದು ಶಾಲೆಗೆ ಮತ್ತೊಮ್ಮೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ . ಬುಧವಾರದವರೆಗೆ ಶಾಲೆಯ ಆಡಳಿತ ಮಂಡಳಿಗೆ ಹಿಂದೂ ಸಂಘಟನೆ ಹೆಚ್ಚರಿಸಿ ಸಮಯಕೊಟ್ಟಿದು ಈ ಘಟನೆಯ ಬಗ್ಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕಿ ವಿರುದ್ಧ ಸರಿಯಾ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಯಲಿದೆ ಎಂದು ಹಿಂದೂ ಸಂಘಟನೆ ಹೆಚ್ಚರಿಸಿತ್ತು.ಈ ಹೋರಾಟಕ್ಕೆ ಮಣಿದು ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಚ್ಚೆತ್ತ ಶಾಲೆಯ ಆಡಳಿತ ಮಂಡಳಿ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಅಮಾನತು ಮಾಡಿದೆ. ಸ್ಥಳಕ್ಕೆ ಆಗಮಿಸಿದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕಿಯನ್ನು ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ.
ಶಾಲೆಯ ಮುಂಭಾಗ ಜಮಾವಣೆಗೊಂಡ ಪೋಷಕರು ಶಿಕ್ಷಕಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಪ್ರತಿಭಟನಾ ನಿರತ ಪೋಷಕರ ಮುಂದೆ ಆಗಮಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕಿ ಪ್ರಭಾ ಅವರನ್ನು ಅಮಾನತು ಮಾಡಿದ್ದಾಗಿ ತಿಳಿಸಿದರು.
ಅಧಿಕೃತವಾಗಿ ಲಿಖಿತವಾಗಿ ಶಾಲೆಯ ಲೆಟರ್ ಹೆಡ್ನಲ್ಲಿ ಅಮಾನತ್ತಿನ ಬಗ್ಗೆ ಸ್ಪಷ್ಟನೆ ನೀಡಲಾಗಿದ್ದು, ಮುಂದೆ ಶಿಕ್ಷಣ ಇಲಾಖೆ ಪ್ರಕರಣದ ಆಂತರಿಕ ತನಿಖೆ ನಡೆಸಲಿದೆ. ಶಿಕ್ಷಣ ಇಲಾಖೆ ತನಿಖಾ ವರದಿ ಆಧಾರದ ಮೇಲೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.


