ಮಂಗಳೂರು : ಮದ್ಯ ಪ್ರಾಚ್ಯದಲ್ಲಿ ನಡೆಯುವ ಯುದ್ಧ ಭೀತಿಯ ನಡುವೆ ಅಮೇರಿಕಾದ ಟೆಕ್ಸಾಸ್‌ನಿಂದ ಮಂಗಳೂರಿಗೆ ಪಿಕ್ಸಿಸ್ ಪಯನೀರ್ ಹೆಸರಿನ ಎಲ್ ಪಿಜಿ ಕಾರ್ಗೋ ಹಡಗು. ಬಂದು ತಲುಪಿದೆ.
ಈ ಹಡಗು ಅಮೆರಿಕದ ಟೆಕ್ಸಾಸ್‌ನಿಂದ ಎಲ್‌ಪಿಜಿ ಹೊತ್ತು ತಂದ ಕಾರ್ಗೋ ಶಿಫ್ ಇದಾಗಿದ್ದು ಇದೀಗ ಪಿಕ್ಸಿಸ್ ಪಯನೀರ್ ಎಂಬ ಹಡಗು ಮಂಗಳೂರಿನ ನ್ಯೂ ಮಂಗಳೂರು ಬಂದರಿಗೆ ತಲುಪಿದೆ. ಈ ಹಡಗು 16,714 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತು ತಂದಿದ್ದು ವಿದೇಶದಿಂದ ಕರ್ನಾಟಕಕ್ಕೆ ಆಗಮಿಸಿದ ಮೊದಲ ಎಲ್ ಪಿ ಜಿ ಹಡಗು ಇದಾಗಿದೆ. ಏಜೀಸ್ ಕಂಪೆನಿಗೆ ಎಲ್ ಪಿ ಜಿ ಹೊತ್ತು ತಂದಿದ್ದು ಮಾರ್ಚ್ 14 ರಂದು ಅಮೇರಿಕದಿಂದ ಹೊರತು ಇದೀಗ ಮಂಗಳೂರು ಬಂದರಿಗೆ ಬಂದು ತಲುಪಿದೆ.
ಮತ್ತೊಂದು 7.7 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತು ತಂದ ರಷ್ಯಾದ ಆಯಿಲ್ ಟ್ಯಾಂಕರ್ ಹಡಗು ರಾಜ್ಯದ ಕರಾವಳಿಯ ಮಂಗಳೂರಿಗೆ ತಲುಪಿದೆ. ಕೆಲ ದಿನಗಳ ಹಿಂದೆ ಚೀನಾದತ್ತ ಹೊರಟಿದ್ದ ರಷ್ಯಾದ ಅಕ್ವಾ ಟೈಟನ್ ಮರೈನ್ ಹೆಸರಿನ ಹಡಗನ್ನು ಭಾರತದತ್ತ ಡೈವರ್ಟ್ ಮಾಡಲಾಗಿತ್ತು ಇದೀಗ ಬಂದು ತಲುಪಿದೆ. ಮಂಗಳೂರು ಕಡಲ ತೀರದಿಂದ ಸಮುದ್ರ ಮಧ್ಯೆ 12 ನಾಟಿಕಲ್ ಮೈಲ್ಸ್ ದೂರದಲ್ಲಿರುವ ಜಟ್ಟಿ ಮೂಲಕ ಆಳ ಸಮುದ್ರದಲ್ಲಿರುವ ಪೈಪ್ ಲೈನ್ ಮೂಲಕ ಕಚ್ಚಾ ತೈಲ ಎಂಆರ್ ಪಿಎಲ್ ಗೆ ಅನ್ ಲೋಡ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.


