ಮಂಗಳೂರು ; ಅಪಘಾತದಲ್ಲಿ ಯಕ್ಷಗಾನ ಹಿರಿಯ ಕಲಾವಿದ ಮೃತ ಪಟ್ಟ ಘಟನೆ ನಡೆದಿದೆ .ಆದರೆ ಈ ಸಾವಿಗೆ ಕಲಾವಿದನ ಕುಟುಂಬಸ್ಥರು ಯಕ್ಷಗಾನದ ಯಜಮಾನ ದೇವಿಪ್ರಸಾದ್ ಶೆಟ್ಟಿಯವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಯಕ್ಷಗಾನ ಕಲಾವಿದರನ್ನು ಆನಂದ ಕಟೀಲು ಎಂದು ಗುರಿತಿಸಲಾಗಿದೆ. ಯಕ್ಷಗಾನ ಬದುಕನ್ನು ಕಟ್ಟಿ ಜೀವಿಸುತ್ತಿರುವ ಈ ಬಡ ಜೀವಗಳಿಗೆ ಆಸ್ಪತ್ರೆ ಯ ಖರ್ಚು ನಿರ್ವಹಿಸಲು ಸಾಧ್ಯವಾಗದ ಕಾರಣ ಕುಟುಂಬಸ್ಥರು ಯಕ್ಷಗಾನ ಕಟೀಲು ಮೇಳ ದ ಯಜಮಾಮ ದೇವಿ ಪ್ರಸಾದ್ ಶೆಟ್ಟಿ ಯವರನ್ನು ಅಂಗಲಾಚಿರುತ್ತಾರೆ ಆದರೆ ಯಕ್ಷಗಾನ ದ ಯಜಮಾನರು ಕಲಾವಿದನಿಗೆ ಉತ್ತಮ ಚಿಕಿತ್ಸೆ ನೀಡುವ ಬದಲು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿಯ ವೆನ್ ಲಾಕ್ ಆಸ್ಪತ್ರೆಯಲ್ಲಿ ಇನ್ನಿತರ ಪ್ರಕರಣದಲ್ಲಿ ಚಿಕಿತ್ಸೆ ಪಡೆಯುವವರು ಬದುಕಿ ಬರುವುದು ಕಷ್ಟ ಇನ್ನೂ ಗಂಭೀರ ಗಾಯಗೊಂಡವರು ಬದುಕಿಬರುವುದು ಉಂಟೇ ಎಂದು ಯಕ್ಷಗಾನ ಮೇಳದ ಕಲಾವಿದರು ಹಾಗೂ ಮೃತನ ಕುಟುಂಬಸ್ಥರು ದೇವಿಪ್ರಸಾದ್ ಶೆಟ್ಟಿವಿರುದ್ದ ಆಕ್ರೋಶ ಹೊರಹಾಕಿದ್ದಾರೆ.ಒಟ್ಟಿನಲ್ಲಿ ದೇವರ ಹೆಸರಲ್ಲಿ ಹಣಗಳಿಸುವ ಯಕ್ಷಗಾನ ತಂಡ ತನ್ನ ಕಲಾವಿದರ ಜೀವ ಉಳಿಸುವುದರಲ್ಲಿ ವಿಫಲವಾಗಿರುವುದು ಬೇಸರದ ಸಂಗತಿ.
ಮೊದಲು ಸಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಕಲಾವಿದನ ಸ್ಥಿತಿ ಚಿಂತಾಜನಕವಾಗಿರುವಾಗಲೇ ಆಸ್ಪತ್ರೆಯ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣ ಕೊಟ್ಟು, ಬಡ ಕುಟುಂಬಸ್ಥರು ಅಂಗಲಾಚಿ ಬೇಡಿದರೂ ಯಜಮಾನ ಉಚಿತ ಚಿಕಿತ್ಸೆ ಕೊಡಿಸಲು ವೆನ್ಲಾಕ್ ಆಸ್ಪತ್ರೆಗೆ ಸೇರಿಸಿದ್ದಾರೆ. ಇದೀಗ ಮೃತದೇಹವನ್ನು ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ರವಾನಿಸಲಾಗಿದ್ದು ಪರಿಹಾರಕ್ಕಾಗಿ ಮೃತನ ಕುಟುಂಬಸ್ಥರು ಯಕ್ಷಗಾನ ಮಂಡಳಿಗೆ ಒತ್ತಾಯಿಸಿದ್ದು ನ್ಯಾಯಕ್ಕಾಗಿ ಮಾಧ್ಯಮದ ಮೊರೆಹೋಗಿದ್ದಾರೆ.


