Monday, February 16, 2026
Flats for sale
Homeಜಿಲ್ಲೆಮಂಗಳೂರು : ಅಜ್ಜಿಗೆ ಇಷ್ಟವೆಂದು ತಿಥಿಗೆ ಬಡಿಸಲು ಅಕ್ರಮವಾಗಿ ಬೇಟೆಯಾಡಿದ ಆಮೆಗಳು ಪೋಲೀಸರ ವಶಕ್ಕೆ,ನಾಲ್ವರ ಬಂಧನ.

ಮಂಗಳೂರು : ಅಜ್ಜಿಗೆ ಇಷ್ಟವೆಂದು ತಿಥಿಗೆ ಬಡಿಸಲು ಅಕ್ರಮವಾಗಿ ಬೇಟೆಯಾಡಿದ ಆಮೆಗಳು ಪೋಲೀಸರ ವಶಕ್ಕೆ,ನಾಲ್ವರ ಬಂಧನ.

ಮಂಗಳೂರು : ತನ್ನ ಅಜ್ಜಿಗೆ ಆಮೆ ಮಾಂಸ ಇಷ್ಟವೆಂದು ಆಕೆಯ ತಿಥಿಗೆ ಬಡಿಸಲೆಂದು ಅಕ್ರಮವಾಗಿ ಆಮೆ ಬೇಟೆಯಾಡಿ ಮಾಂಸ ಮಾಡಲು ಯತ್ನಿಸುತ್ತಿದ್ದಾಗಲೇ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದು ನಾಲ್ಕು ಆಮೆಗಳ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳ ಕಾಸರಗೋಡಿನ ಮಣಿಕಂಠ(42), ಮಂಗಳೂರು ನಗರದ ಮುಲ್ಕಿಯ ರಾಜೇಂದ್ರ(54), ಮೂಡಬಿದಿರೆ ಶಿರ್ತಾಡಿಯ ವಿಘ್ನೇಶ್(32), ಬೆಳ್ತಂಗಡಿಯ ಪ್ರಶಾಂತ್(35) ಎಂದು ತಿಳಿದುಬಂದಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಆರೋಪಿಗಳು ಬೆಳ್ತಂಗಡಿಯ ಸೋಮವತಿ ನದಿಯಲ್ಲಿ ಅಕ್ರಮವಾಗಿ ನಾಲ್ಕು ಆಮೆಗಳನ್ನು ಬೇಟೆಯಾಡಿ ನದಿ ಬದಿಯಲ್ಲಿ ಮಾಂಸ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟ‌ರ್ ಆನಂದ್ ಎಂ. ನೇತೃತ್ವದ ತಂಡ ದಾಳಿ ಮಾಡಿ ನಾಲ್ವರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ ನಾಲ್ಕು ಸುಟ್ಟ ಆಮೆಯನ್ನು ವಶಪಡಿಸಿಕೊಂಡಿದ್ದಾರೆ.

ಸತ್ತ ಆಮೆಗಳನ್ನು ಮುಂದಿನ ತನಿಖೆಗಾಗಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು ಆರೋಪಿಗಳು ತಮ್ಮ ಅಜ್ಜಿ ದೇವಮ್ಮರವರ ಉತ್ತರಕ್ರಿಯೆ ಕಾರ್ಯಕ್ರಮಕ್ಕಾಗಿ ಬೆಳ್ತಂಗಡಿಗೆ ಆಗಮಿಸಿದ್ದರು. ಇವರು ಅಜ್ಜಿಯ ಪ್ರೀತಿಯ ಆಮೆ ಪದಾರ್ಥ ಮಾಡಿಕೊಂಡು ಬಂದು ತಿಥಿ ಕಾರ್ಯಕ್ರಮದಲ್ಲಿ ಬಡಿಸಲು ತಯಾರಿ ನಡೆಸುತ್ತಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular