Saturday, July 12, 2025
Flats for sale
Homeಜಿಲ್ಲೆಮಂಗಳೂರು : MRPL ನ H2S ಘಟಕದಲ್ಲಿ ಅನಿಲ ಸೋರಿಕೆ,ಇಬ್ಬರು ಸಾವು ಮತ್ತೋರ್ವನ ಸ್ಥಿತಿ ಗಂಭೀರ…!

ಮಂಗಳೂರು : MRPL ನ H2S ಘಟಕದಲ್ಲಿ ಅನಿಲ ಸೋರಿಕೆ,ಇಬ್ಬರು ಸಾವು ಮತ್ತೋರ್ವನ ಸ್ಥಿತಿ ಗಂಭೀರ…!

ಮಂಗಳೂರು ; ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ H2S ನ ಘಟಕದ ಟ್ಯಾಂಕ್ ಪ್ಲಾಟ್‌ಫಾರ್ಮ್ ಮೇಲೆ ಇಬ್ಬರು ಹಿರಿಯ ನಿರ್ವಾಹಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ರಕ್ಷಿಸಿ ಶ್ರೀನಿವಾಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆಂದು ಮಾಹಿತಿ ದೊರೆತಿದೆ.

MRPL ನ ಘಟಕದಲ್ಲಿ ಸಣ್ಣ ಪ್ರಮಾಣದ H2S ಅನಿಲ ಸೋರಿಕೆ ಕಂಡುಬಂದಿದ್ದು ಮತ್ತು ಕಾರ್ಮಿಕರು ಮಾಸ್ಕ್ ಧರಿಸಿ ತಮ್ಮ ನಿಯಮಿತ ಕರ್ತವ್ಯದ ಭಾಗವಾಗಿ ಅದನ್ನು ಪರಿಶೀಲಿಸುವಾಗ ಈ ದುರ್ಘಟನೆ ನಡೆದಿದೆ.

ಎಂಆರ್‌ಪಿಎಲ್ ಅಗ್ನಿಶಾಮಕ ಮತ್ತು ಸುರಕ್ಷತಾ ತಂಡ ಸೋರಿಕೆಯನ್ನು ಸರಿಪಡಿಸಿದ್ದು ಈಗ ಅದು ನಿಯಂತ್ರಣ ಕ್ಕೆ ಬಂದಿದೆ ಎಂದು ಆಡಳಿತ ತಿಳಿಸಿದೆ.

ಮೃತರು ಪ್ರಯಾಗರಾಜ್‌ನ 33 ವರ್ಷದ ಎಂಆರ್‌ಪಿಎಲ್ ದೀಪ್ ಚಂದ್ರ ಮತ್ತು ಕೇರಳದ 33 ವರ್ಷದ ಬಿಜಿಲ್ ಪ್ರಸಾದ್ ಎಂದು ತಿಳಿದಿದೆ. ರಕ್ಷಣೆಗೆ ಹೋದ ಗದಗದ ವಿನಾಯಕ್ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿರುವವರು ಅಪಾಯದಿಂದ ಪಾರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular