ಮಂಗಳೂರು : ಉರ್ವಾ ಪೊಲೀಸ್ ಠಾಣೆಯಲ್ಲಿ 2017 ರಲ್ಲಿ ವರದಿಯಾಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ನಿಯಾಜ್ ಅಲಿಯಾಸ್ ನಿಯಾ ಎಂಬಾತನು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದದ್ದು ಇಂದು 11 ರಂದು ಬೆಳಗಿನ ಜಾವ ಬೆಂಗಳೂರಿನ ಹುಳಿಮಾವು ಅರಕೆರೆ ಎಂಬಲ್ಲಿ ವಶಕ್ಕೆ ಪಡೆದು ಬಂಧಿಸಿದ್ದಾರೆ. ಈತನ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿದ್ದು, ಬೇರೆ ಬೇರೆ ನ್ಯಾಯಾಲಯಗಳಲ್ಲಿ ಈತನ ವಿರುದ್ದ ವಾರೆಂಟ್ ಹೊರಡಿಸಿದ್ದರು.
ಮಂಗಳೂರು ನಗರ ಕಮೀಷನರೇಟ್ ಘಟಕದಲ್ಲಿ ಕಳೆದ 03 ತಿಂಗಳಲ್ಲಿ ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಕನಿಷ್ಟ 02 ವರ್ಷದಿಂದ ಹಾಜರಾಗದೇ ತಲೆಮರೆಸಿಕೊಂಡಿದ್ದ 52 ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು ಅದರಲ್ಲಿ ಕೋಮು ಗಲಭೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾದ 1. ಚಂದ್ರಹಾಸ ಕೇಶವ್ ಶೆಟ್ಟಿಗಾರ್. 2. ಲೀಲಾಧರ್, 3. ಖಾದರ್ ಕುಳಾಯಿ, 4. ಶಾಕೀಬ್, 5. ಮೊಹಮ್ಮದ್ ಹುಸೇನ್.. 6. ರಮೀಜ್ ಒಟ್ಟು 06 ಜನ ಅಲ್ಲದೆ ಬೇರೆ ಬೇರೆ ಠಾಣೆಗಳಲ್ಲಿ ರೌಡಿ ಶೀಟರ್‌ಗಳಾದ 1. ಅದಿತ್ಯ ಕುಮಾರ್. 2. ಭರತ್ ಬಾಲು. 3. ಮೊಹಮ್ಮದ್ ಸುಹೈಬ್, 4. ಮೊಹಮ್ಮದ್ ಮುಸ್ತಾಫ್. 5. ಮೊಹಮ್ಮದ್ ನಜೀಮ್. 6. ಉಮ್ಮರ್ ನವಾಫ್, 7. ಉಮ್ಮರ್ ಫಾರೂಕ್, 8. ಫರಾಜ್. 9. ಮೊಹಮ್ಮದ್ ನಿಯಾಜ್ ಒಟ್ಟು 9 ಜನ ಹಾಗೂ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ 1. ಪುಂಪಾ ಕಾಶಿ, 2. ದೀಪಾ ನಾರಾಯಣ 3. ಮೊಹಮ್ಮದ್ ನಿಹಾಲ್. 4.ಮೊಹಮ್ಮದ್ ಶಫೀಕ್, 5. ಬಾಬರ್ ಪಾಷಾ, 6. ಮೊಹಮ್ಮದ್ ಇಟ್ಬಾಲ್, 7. ಅಬೂಬಕರ್ ಒಟ್ಟು 7 ಜನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾದ 1. ಶಾನವಜ್ @ ಶಾನ್, ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಒಳಗೊಂಡಿರುವ 1. ಗಣೇಶ್ ಲಕ್ಷ್ಮಣ್ ಸಾಕೇತ್, 2. ಅದಿತ್ಯ ಕುಮಾರ್. 3 ಅಬ್ದುಲ್ ನಾಸೀರ್, 4. ಇಮ್ರಾನ್ @ ಇಂಬು, 5. ರಮೀಜ್ 6. ಮೊಹಮ್ಮದ್ ನಜೀಮ್ ಒಟ್ಟು 6 ಜನ ಆರೋಪಿಗಳನ್ನು ಮಾನ್ಯ ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿದೆ.
ಅಲ್ಲದೇ ಹೆಚ್ಚು ಅವಧಿಯಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ಇದ್ದಂತಹ ನ್ಯಾಯಲಯದಿಂದ ವಾರೆಂಟ್ ಹೊರಡಿಸಿರುವ ಆರೋಪಿಗಳಾದ 1. ವಿಶಾಲ್ ಕುಮಾರ್ 2. ಮೊಹಮ್ಮದ್ ನಿಹಾಲ್ 3. ಇರ್ಷಾದ್, 4. ಹನೀಫ್ ಕೊಕ್ಕಡ ಮುಂತಾದ 12 ಜನ ಆರೋಪಿಗಳ ವಿರುದ್ಧ ಹೆಚ್ಚುವರಿಯಾಗಿ ಕಲಂ 208, 209 269, ಬಿಎನ್‌ಎಸ್ ನಂತೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.


