Saturday, January 17, 2026
Flats for sale
Homeಜಿಲ್ಲೆಮಂಗಳೂರು ; 19 ಕೆ.ಜಿ ಅಕ್ರಮ ಗೋಮಾಂಸ ಕೊಂಡೊಯ್ಯುವ ವೇಳೆ ಅಡ್ಡಗಟ್ಟಿದ ಯುವಕರಿಂದ ಹಲ್ಲೆಗೆ ಯತ್ನ,ಸ್ಕೂಟರ್...

ಮಂಗಳೂರು ; 19 ಕೆ.ಜಿ ಅಕ್ರಮ ಗೋಮಾಂಸ ಕೊಂಡೊಯ್ಯುವ ವೇಳೆ ಅಡ್ಡಗಟ್ಟಿದ ಯುವಕರಿಂದ ಹಲ್ಲೆಗೆ ಯತ್ನ,ಸ್ಕೂಟರ್ ಅಡ್ಡ ಬಿದ್ದು ಸೈಲೆನ್ಸರ್ ತಾಗಿ ಯುವತಿಗೆ ಗಾಯ,ಪ್ರಕರಣ ದಾಖಲು.

ಮಂಗಳೂರು ; ಇಂದು ಬೆಳಿಗ್ಗೆ 10 ಗಂಟೆಗೆ ಅಬ್ದುಲ್ ಸತ್ತಾರ್ ಮುಲ್ಲರಪಟ್ನ ಎಂಬ ವ್ಯಕ್ತಿ ತನ್ನ 11 ವರ್ಷದ ಮಗಳೊಂದಿಗೆ ಸುಮಾರು 19 ಕೆಜಿ ಗೋಮಾಂಸವನ್ನು ಯಾವುದೇ ದಾಖಲೆಗಳಿಲ್ಲದೆ ಹೋಗುತ್ತಿದ್ದ ಸಂದರ್ಭದಲ್ಲಿ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮಳಲಿ ನಾರ್ಲಪದವಿ ರಸ್ತೆಯಲ್ಲಿ ಇಬ್ಬರು ಯುವಕರು ಬಂದು ತಡೆದಿದ್ದು ಬೈಕ್ ತಡೆದು ಅಡ್ಡ ಗಟ್ಟಿದ ಪರಿಣಾಮ ಸೈಲೆನ್ಸರ್ ತಗುಲಿ ಬಾಲಕಿಯ ಕಾಲು ಸುಟ್ಟುಹೋದ ಘಟನೆ ನಡೆದಿದೆ.

ಯುವಕರನ್ನು ಯೆಡಪದವಿನ ನಿವಾಸಿಗಳಾದ ಸುಮಿತ್ ಭಂಡಾರಿ (21) ಮತ್ತು ರಜತ್ ನಾಯಕ್ (30) ಎಂದು ತಿಳಿದುಬಂದಿದೆ.

ಟಾಟಾ ಸುಮೋದಲ್ಲಿ ಬಂದು ಅವರನ್ನು ಯುವಕರು ತಡೆದ ಸಂದರ್ಭದಲ್ಲಿಸತ್ತಾರ್ ಬೈಕ್ ಬಿಟ್ಟು ಓಡಿಹೋಗಿದ್ದು ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.ಇದೀಗ ಅಕ್ರಮ ಗೋಮಾಂಸ ಸಾಗಣೆ ಮಾಡಿದಕ್ಕೆ ಪೊಲೀಸರು ಸುಮೊಟೋ ಪ್ರಕರಣದಲಿಸಿದ್ದು ಈಡಿಗ ಇಬ್ಬರು ಯುವಕರ ವಿರುದ್ಧ ನೈತಿಕ ಪೊಲೀಸ್ ಗಿರಿ ಆರೋಪದ ಹಿನ್ನೆಲೆ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular