ಭೋಪಾಲ್ : ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಬುಧವಾರ ಮತ್ತೆ 6 ಮಕ್ಕಳು ಮೃತಪಟ್ಟಿದ್ದಾರೆ. ಪರಿ ಣಾಮ ರಾಜ್ಯದಲ್ಲಿ ಕೆಮ್ಮಿನ ಔಷಧಿ ಸೇವನೆ
ಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ರಾಜೇಂದ್ರ ಶುಕ್ಲಾ, ವಿಷಕಾರಿ ಕೆಮ್ಮಿನ ಸಿರಫ್ ಸೇವಿಸಿ ಈವರೆಗೂ ಮೃತಪಟ್ಟ ಮಕ್ಕಳ ಪೈಕಿ 17 ಮಕ್ಕಳು ಛಿಂದ್ವಾರಾ ಜಿಲ್ಲೆಗೆ ಸೇರಿದವರಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಕೆಮ್ಮಿನ ಔಷಧಿಯನ್ನು ಸೇವಿಸಿ ಮೃತಪಟ್ಟ ಮಕ್ಕಳ ಸಂಖ್ಯೆ ಈಗ 20ಕ್ಕೆ ಏರಿಕೆಯಾಗಿದೆ ಈ ಪೈಕಿ 17 ಜನ ಛಿಂದ್ವಾರ ಜಿಲ್ಲೆಗೆ ಸೇರಿದವರು. ಕೋಲ್ಡ್ರೀಫ್ ಸಿರಪ್ ಉತ್ಪಾದನಾ ಮಾಲೀಕನ ಬಂಧಿಸಲು ಚೆನ್ನೆ Êಗೆ ಮ.ಪ್ರದೇಶ ಪೊಲೀಸರು ೬ ರಾಜ್ಯಗಳ ನಂತರ ಪಂಜಾಬ್‌ನಲ್ಲೂ ಈಗ ಕೋಲ್ಡ್ರೀಫ್ ಕೆಮ್ಮಿನ ಸಿರಪ್ ಬ್ಯಾನ್ ಆಗಿದೆ.
ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೋಲ್ಡ್ರಿಫ್ ಉತ್ಪಾದಕ ಕಂಪನಿಯ ಮಾಲೀಕನನ್ನು ಬಂಧಿಸಲು ಛಿಂದ್ವಾರ್ ಪೊಲೀಸರ ತಂಡ ಈಗಾಗಲೇ ಚೆನ್ನೈ ಹಾಗೂ ಕಾಂಚಿಪುರಂಗೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಸಿರಪ್ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಮಕ್ಕಳ ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಸರ್ಕಾರವೇ ಭರಿಸುವುದಾಗಿ ಘೋಷಿಸಿದ್ದಾರೆ. ಛಿಂದ್ವಾರ್‌ದಲ್ಲಿ ೬೦೦ಕ್ಕೂ ಹೆಚ್ಚು ಕಾಫ್ ಸಿರಫ್ ಬಾಟಲ್‌ಗಳು ಪತ್ತೆಯಾಗಿದ್ದು, 443 ಬಾಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬAಧ ಆರೋಗ್ಯ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮನೆ ಮನೆಗೆ ತೆರಳಿ ಔಷಧ ಬಾಟಲ್‌ಗಳನ್ನು ವಶಪಡಿಸಿಕೊಳ್ಳುವಂತೆ ನಿರ್ದೇಶಿಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದ ಸಂಬAಧ ರಾಜ್ಯ ಸರ್ಕಾರ ಸೋಮವಾರ ಇಬ್ಬರು ಡ್ರಗ್ ಇನ್ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸತ್ತು. ಈ ಸಂಬAಧ ಮಧ್ಯಪ್ರದೇಶದ ಸರ್ಕಾರ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನೂ ರಚಿಸಿದೆ. ಇದೇ ವೇಳೆ ಕೋಲ್ಡ್ರೀಫ್ ಸಿರಪ್‌ನಿಂದ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಔಷಧ ನಿಷೇಧ ಮಾಡಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಕೋಲ್ಡ್ರೀಫ್ ಸಿರಫ್ ನಿಷೇಧಿಸಿದ ೬ನೇ ರಾಜ್ಯವಾಗಿ ಹೊರಹೊಮ್ಮಿದೆ.