ಭುವನೇಶ್ವರ : ಕಾಂಗ್ರೆಸ್ ಸಂಸದ ಧೀರಜ್ ಸಾಹು ಒಡೆತನ ಡಿಸ್ಟಿಲರಿಗಳಿಗೆ ಸಂಬAಧಿಸಿದAತೆ ಸಿಕ್ಕಿರುವ ಅಪಾರ ಪ್ರಮಾಣದ ಹಣದ ಎಣಿಕೆ ಕಾರ್ಯ ನಾಲ್ಕನೇ ದಿನವಾದ ಭಾನುವಾರವೂ ನಡೆಯಿತು. ಇದುವರೆಗೆ 350 ಕೋಟಿ ರೂ.ಗೂ ಹೆಚ್ಚು ಹಣವನ್ನು ಎಣಿಸಿದ್ದು, ಇದು ಯಾವುದೇ ಒಬ್ಬ ವ್ಯಕ್ತಿಯ ಬಳಿ ದೊರೆತ ಅತಿ ಹೆಚ್ಚಿನ ನಗದಾಗಿದೆ.
ಒಡಿಶಾದ ಬೋಲಂಗೀರ್ನಲ್ಲಿ ಧೀರಜ್ ಸಾಹು ಸೋದರನ ಮಾಲೀಕತ್ವದ ಡಿಸ್ಟಿಲರಿ ಆವರಣದಲ್ಲಿ ಸಿಕ್ಕಿರುವ ಹಣದ ಎಣಿಕೆ ಮುಂದುವರಿದಿದೆ. ಒಟ್ಟು 176 ಚೀಲ ಹಣ ತುಂಬಿದ ಚೀಲಗಳಿದ್ದು, ಈ ಪೈಕಿ ಇದುವರೆಗೆ 140 ಕ್ಕೂ ಹೆಚ್ಚು ಚೀಲಗಳನ್ನು ಎಣಿಸಲಾಗಿದೆ. ಐವತ್ತಕ್ಕೂ ಹೆಚ್ಚು ಅಧಿಕಾರಿಗಳು ಎಣಿಕೆ ಕಾರ್ಯದಲ್ಲಿ ನಿರತಾಗಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾದ ಪ್ರಾದೇಶಿಕ ನಿರ್ವಾಹಕ ಭಗತ್ ಬೆಹೆರಾ ತಿಳಿಸಿದ್ದಾರೆ.
ಭಾನುವಾರ ಹೊಸ ಎಣಿಕೆ ಯಂತ್ರಗಳನ್ನು ತರಲಾಗಿದೆ. ಒಟ್ಟು40 ಯಂತ್ರಗಳು ಕಾರ್ಯನಿರತವಾಗಿವೆ. ಯಂತ್ರಗಳು ಆಗಾಗ ಕೆಟ್ಟು ನಿಲ್ಲುತ್ತಿರುವುದರಿಂದ ಸ್ಥಳದಲ್ಲಿ ಇಂಜಿನಿಯರ್ಗಳನ್ನೂ ನಿಯೋಜಿಸಲಾಗಿದೆ.
ಧೀರಜ್ ಸಾಹು ಪ್ರಕರಣದಿಂದ ಕಾಂಗ್ರೆಸ್ ದೂರ ಸರಿದುಕೊಂಡಿದೆ. ಅಷ್ಟೊಂದು ಹಣ ದೊರೆತಿರುವುದರ ಕುರಿತು ಧೀರಜ್ ಮಾತ್ರ ಉತ್ತರಿಸಲು ಸಾಧ್ಯ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಅವರ ಬಂಧನಕ್ಕೆ ಒತ್ತಾಯಿಸಿ ಹಲವೆಡೆ ಬಿಜೆಪಿಯಿಂದ ಪ್ರತಿಭಟನೆಗಳು ನಡೆದಿವೆ. ಇಷ್ಟೊಂದು ಪ್ರಮಾಣದ ಹಣ ಇರುವುದು ಆಶ್ಚರ್ಯ ಎಂದಿದ್ದಾರೆ, ಜಾರ್ಖಂಡ್ನ ಕಾಂಗ್ರೆಸ್ ನಾಯಕ ಸುಬೋಧ್ ಕಾಂತ್ ಸಹಾಯ್. ಆದರೆ ಮತ್ತೊಬ್ಬ ನಾಯಕ ಬನ್ನಾ ಗುಪ್ತಾ ಧೀರಜ್ ಅವರನ್ನು ಬೆಂಬಲಿಸಿ, ಸಾಹು ಮನೆತನದ ದೊಡ್ಡ ಉದ್ದಿಮೆ ಇದೆ. ನೂರಾರು ವರ್ಷಗಳಿಂದ ಅದನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಹೀಗಾಗಿ ಅದನ್ನು ಲಂಚದ ಹಣ ಎನ್ನುವಂತಿಲ್ಲ ಎಂದು ಸಮರ್ಥಿಸಿಕೊAಡಿದ್ದಾರೆ. ಧೀರಜ್ ಮೇಲೆ ಕ್ರಮಕ್ಕೆ ಆಗ್ರಹಿಸಿರುವ ಬಿಜೆಪಿ, ಯಾವಾಗಲೂ ಇಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳನ್ನು ತಮಗೆ ಅನುಕೂಲಕರವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಆರೋಪ ಮಾಡುತ್ತಿರುವ ವಿಪಕ್ಷಗಳು, ಏಕೆ ಮೌನವಾಗಿವೆ ಎಂದು ಪ್ರಶ್ನಿಸಿದೆ.


