ಭಟ್ಕಳ: ಹಿಂದೂ ವಿರೋಧಿ ನೀತಿಯಿಂದ ಹಿಂದೂ ಕಾರ್ಯಕರ್ತರು ಕಾಂಗ್ರೆಸ್ ಸಿದ್ದರಾಮಯ್ಯ ಸರಕಾರದ ವಿದುದ್ದ ರೊಚ್ಚಿಗೆದ್ದಿದ್ದಾರೆ. ಕೇವಲ ಹಿಂದೂಗಳ ಧ್ವಜಗಳನ್ನು ತೆರವುಗೊಳಿಸುವುದರಿಂದ ಅನ್ಯ ಮತೀಯರ ಧ್ವಜಗಳಿಗೆ ರಕ್ಷಣೆ ಕೋರುವುದರಿಂದ ಬಿಜೆಪಿಗರಿಗೆ ಇದೊಂದು ದೊಡ್ಡ ಅಸ್ತ್ರವಾಗಿದೆ.
ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರಕಾರ ರಾಜ್ಯದ ಕೆಲವು ಕಡೆ ಬಾವುಟ, ಧ್ವಜ ತೆರವುಗೊಳಿಸುವ ಪ್ರಸಂಗಗಳು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗುತ್ತಿದೆ. ಅದೇ ರೀತಿ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ನಲ್ಲಿ ಠರಾವು ಮಾಡಿ ಅಳವಡಿಸಲಾಗಿದ್ದ ವೀರ ಸಾವರ್ಕರ್ ವೃತ್ತ ಹಾಗೂ ಕಟ್ಟಿದ್ದ ಭಗವಾಧ್ವಜವನ್ನು ಗ್ರಾಮ ಪಂಚಾಯತ್ನವರೇ ಪೊಲೀಸರ ನೆರವಿನಿಂದ ಜೆಸಿಬಿ ಮೂಲಕ ತೆಗೆದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯದಲ್ಲಿ ಹನುಮ ಧ್ವಜ ತೆಗೆದಿರುವ ಕುರಿತು ತೀವ್ರ ಹೋರಾಟ ನಡೆಯುತ್ತಿರುವಾಗಲೇ ಭಟ್ಕಳದ ತೆಂಗಿನಗುAಡಿಯಲ್ಲಿ ಹಾಕಲಾಗಿದ್ದ ವೀರ ಸಾವರ್ಕರ್ ಸರ್ಕಲ್ ತೆರವುಗೊಳಿಸಲು ಮುಂದಾದ ಸರಕಾರದ ವಿರುದ್ಧ ಬಿಜೆಪಿಗೆ ಇನ್ನೊಂದು ಅಸ್ತ್ರ ದೊರೆತಂತಾಗಿದೆ. ಮAಗಳವಾರ ನೂರಾರು ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಿ ತೆರವಾದ ಸರ್ಕಲ್ನ್ನು ಮತ್ತೆ ನಿರ್ಮಾಣ ಮಾಡಿ ಭಗವಾಧ್ವಜ ಹಾರಿಸಿದರು.
ಈ ಸಂದರ್ಭದಲ್ಲಿ ಒಂದು ಹಂತದಲ್ಲಿ ಪಿಡಿಒ ಅವರೇ ತಾವು ತೆರವುಗೊಳಿಸುವಂತೆ ಹೇಳಿಲ್ಲ ಎನ್ನುವ ಹೇಳಿಕೆಯೂ ಕೂಡ ಅವರಿಗೆ ಪುನರ್ ನಿರ್ಮಾಣಕ್ಕೆ ಅವಕಾಶವಾಯಿತು. ಒಟ್ಟಾರೆ ಬೆಳಿಗ್ಗೆಯಿಂದ ಸಂಜೆಯತನಕ ತೀವ್ರ ಗೊಂದಲ ಉಂಟಾಗಿ ಅಧಿಕಾರಿಯ ಎಡವಟ್ಟು ನೀತಿಯಿಂದಾಗಿ ಅಶಾಂತಿಯ ವಾತಾವರಣ ಸೃಷ್ಟಿಯಾಗುವಂತಾಗಿತ್ತು. ತೆರವುಗೊಳಿಸುವ ಕ್ರಮಕ್ಕೆ ಮುಂದಾಗುತ್ತಿದ್ದAತೆಯೇ ಹೆಬಳೆ ಗ್ರಾ.ಪಂ. ಎದುರು ನೂರಾರು ಹಿಂದೂ ಕಾರ್ಯಕರ್ತರು ಮತ್ತು ಗ್ರಾ.ಪಂ. ಸದಸ್ಯರು ಪ್ರತಿಭಟನೆ ಆರಂಭಿಸಿದರು.
ಸರಕಾರದ ವಿರುದ್ಧ, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಮುಖಂಡ ಹಾಗೂ ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಅವರು ಪಿಡಿಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಶ್ರೀಕಾಂತ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಕಾರ್ಯದರ್ಶಿ ಭಾಸ್ಕರ ದೈಮನೆ ಸೇರಿದಂತೆ ನೂರಾರು ಕಾರ್ಯಕರ್ತರು, ಹಿಂದೂ ಸಂಘಟನೆ ಪ್ರಮುಖರು, ನಾಗರಿಕರು ಸೇರಿದ್ದರು.


