Saturday, March 14, 2026
Flats for sale
Homeಜಿಲ್ಲೆಭಟ್ಕಳ: ಕಾರು-ಲಾರಿ ಡಿಕ್ಕಿ ಉದ್ಯಾವರ ಮಹಿಳೆ ಸಾವು, ಪತಿ, ಮಗಳಿಗೆ ಗಾಯ.

ಭಟ್ಕಳ: ಕಾರು-ಲಾರಿ ಡಿಕ್ಕಿ ಉದ್ಯಾವರ ಮಹಿಳೆ ಸಾವು, ಪತಿ, ಮಗಳಿಗೆ ಗಾಯ.

ಉಡುಪಿ :  ಭಟ್ಕಳದಲ್ಲಿನಡೆದ ಅಫಘಾತದಲ್ಲಿ ಕಾರು ಹಾಗೂ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಉದ್ಯಾವರದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಪತಿ ಮತ್ತು ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮೃತ ಮಹಿಳೆ ರೀಟಾ ಡಿಸೋಜಾ. ಅವರ ಪತಿ ಕ್ಸೇವಿಯರ್ ರಾಜ್ ಡಿಸೋಜಾ ಮತ್ತು ಮಗಳು ಇನ್ರಿಕಾ ಗಾಯಗೊಂಡಿದ್ದಾರೆ. ದುರಂತ ಸಂಭವಿಸಿದಾಗ ಕುಟುಂಬವು ಗೋವಾಕ್ಕೆ ತೆರಳುತ್ತಿತ್ತು. ಅಪಘಾತಕ್ಕೀಡಾದ ಟ್ರಕ್ ಮಂಗಳೂರಿನಿಂದ ಮುರ್ಡೇಶ್ವರ ಕಡೆಗೆ ಹೋಗುತ್ತಿತ್ತು.

ತೀವ್ರವಾಗಿ ಗಾಯಗೊಂಡಿದ್ದ ರೀಟಾಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆಯ ಪ್ರಾಣ ಉಳಿಸಲಾಗಲಿಲ್ಲ.
RELATED ARTICLES

LEAVE A REPLY

Please enter your comment!
Please enter your name here

Most Popular