ಬೈಂದೂರು : ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನ ಬಾವಿಯೊಂದರಲ್ಲಿ ಮೊಸಳೆಯೊಂದು ಮಂಗಳವಾರ ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ನಾಗೂರು ಗ್ರಾಮದ ಒಡೆಯರ ಮಠ ವಿಶ್ವನಾಥ ಉಡುಪರ ಮನೆಯ ಬಾವಿಯಲ್ಲಿ ದಿಢೀರನೆ ಕಾಣಿಸಿಕೊಂಡಿದೆ. ಮೊಸಳೆ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ಎಲ್ಲರ ಎದೆಯೇ ನಡುಗಿ ಹೋಗುತ್ತದೆ. ಅಷ್ಟರಮಟ್ಟಿಗೆ ಮೊಸಳೆಗಳು ಎಲ್ಲರಲ್ಲೂ ಭೀತಿ ಮೂಡಿಸಿವೆ.
ಮೊಸಳೆಯನ್ನು ಸೆರೆಹಿಡಿಯಲು ಅನುಕೂಲವಾಗುವಂತೆ, ಬಾವಿಯ ತಡೆಗೋಡೆಯನ್ನು ನೆಲಸಮ ಮಾಡಲಾಗಿದೆ ಮತ್ತು ಕೋಳಿ ಮಾಂಸವನ್ನು ಬೆಟ್ ಆಗಿ ಇರಿಸಲಾಗಿದೆ. ಮೊಸಳೆ ಹಿಡಿಯಲು ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದು ಬೈಂದೂರು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಸಹಿತ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಸ್ಥಳಕ್ಕೆ ದೌಡಹಿಸಿದ್ದಾರೆ.
ಮೊಸಳೆ ಇರುವ ಸುದ್ದಿ ತಿಳಿಯುತ್ತಿದ್ದಂತೆ ಹಲವು ಮಂದಿ ಸ್ಥಳಕ್ಕಾಗಮಿಸಿದ್ದು ಕೆಲಹೊತ್ತು ನೂಕುನುಗ್ಗಲು ಶುರುವಾಗಿತ್ತು ಬಳಿಕ ಹೆಚ್ಚೆತ್ತ ಪೊಲೀಸ್ ಇಲಾಖೆ ಜನಸಂದಣಿಯನ್ನು ನಿಯಂತ್ರಿಸಲು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ . ಮೊಸಳೆಯನ್ನು ಸೆರೆಹಿಡಿಯಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಅದರ ಚಲನವಲನಗಳ ಮೇಲೆ ನಿಗಾವಹಿಸಲಾಗಿದೆ.


