Saturday, January 17, 2026
Flats for sale
Homeರಾಜ್ಯಬೇಲೂರು : ಆಯುಷ್ಮಾನ್ ಭವ್ ಅಭಿಯಾನದ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು : ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿವೆಂಕಟೇಶ್.

ಬೇಲೂರು : ಆಯುಷ್ಮಾನ್ ಭವ್ ಅಭಿಯಾನದ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು : ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿವೆಂಕಟೇಶ್.

ಬೇಲೂರು :ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ, ಕೆಂದ್ರ ಮತ್ತು ರಾಜ್ಯಸರ್ಕಾರದ ಸಹಭಾಗಿತ್ವದ ಆಯುಷ್ಮಾನ್ ಭವ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಮನುಷ್ಯನ ಆಯಸ್ಸು 100ರಿಂದ 50 ಕ್ಕೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯವಂತನೇ, ಸಿರಿವಂತ ಎಂದು ಹೇಳಬಹುದಾಗಿದೆ. ಸಾಕಷ್ಟು ಜನರು ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಗೆ ಖರ್ಚು ಮಾಡಲು ಹಣವಿಲ್ಲದೆ ಮೃತಪಟ್ಟಿರುವ ಘಟನೆಗಳನ್ನು ನಾವು ನೋಡಿದ್ದೇವೆ, ಈ ರೀತಿಯ ಘಟನೆಗಳು ನಡೆಯಬಾರದು, ಎಂದು ಸರ್ಕಾರ ಆಯುಷ್ಮಾನ್ ಭವ್ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬರೂ ಆಯುಷ್ಮಾನ್ ಭವ್ ಯೋಜನೆಯ ಆರೋಗ್ಯ ಕಾರ್ಡ್ ನೋಂದಾಣಿ ಮಾಡಿಕೊಂಡು, ಆರೋಗ್ಯ ಕಾರ್ಡ್ ಪಡೆದುಕೊಳ್ಳಬೇಕು ಎಂದರು.

ಈ ಯೋಜನೆಯ ಲಾಭವನ್ನು ಜನರಿಗೆ ತಿಳಿಸಲು, ಆರೋಗ್ಯ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಅವರು ಮಾತನಾಡಿ ಆಯುಷ್ಮಾನ್ ಭವ್ ಯೋಜನೆಯಡಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ 5 ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಆರೋಗ್ಯ ಕಾರ್ಡ್ ಪಡೆದುಕೊಂಡವರಿಗೆ ಅನಾರೋಗ್ಯವಾದರೆ ಸರ್ಕಾರ 5 ಲಕ್ಷದ ವರೆಗೆ ಖರ್ಚನ್ನು ನೀಡುತ್ತಿದೆ, ಈ ಯೋಜನೆಯ ನೋಂದಣಿಯನ್ನು ಪ್ರತಿ ಮನೆ ಭಾಗಿಲಿಗೆ ತೆರಳಿ ಮಾಡುವ ಯೋಜನೆಯನ್ನು ಸರ್ಕಾರ ರೂಪಿಸಿದೆ. ಪ್ರತಿ ಮಂಗಳವಾರ ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿದೆ.ಕ್ಷಯ ರೋಗ ನಿಯಂತ್ರಣಕ್ಕೆ ಸಾಕಷ್ಟು ಯೋಜನೆ ರೂಪಿಸಿದ್ದು, ಪ್ರದಾನಿ ನರೇಂದ್ರ ಮೋದಿಯವರು 2030 ರೊಳಗೆ ಭಾರತವನ್ನು ಕ್ಷಯರೋಗ ಮುಕ್ತಮಾಡುವ ಗುರಿಯನ್ನು ಹೊಂದಿದ್ದಾರೆ ಎಂದರು‌.

RELATED ARTICLES

LEAVE A REPLY

Please enter your comment!
Please enter your name here

Most Popular