Saturday, March 14, 2026
Flats for sale
Homeರಾಜಕೀಯಬೆಳ್ತಂಗಡಿ : ಸೌಜನ್ಯ ಪ್ರಕರಣದ ರಹಸ್ಯಗಳನ್ನ ಬಿಚ್ಚಿಟ್ಟರೆ ನನ್ನನ್ನು ಸಾಯಿಸ್ತಾರೆ : ಮಾಜಿ ಶಾಸಕ ವಸಂತ...

ಬೆಳ್ತಂಗಡಿ : ಸೌಜನ್ಯ ಪ್ರಕರಣದ ರಹಸ್ಯಗಳನ್ನ ಬಿಚ್ಚಿಟ್ಟರೆ ನನ್ನನ್ನು ಸಾಯಿಸ್ತಾರೆ : ಮಾಜಿ ಶಾಸಕ ವಸಂತ ಬಂಗೇರ.

ಬೆಳ್ತಂಗಡಿ : ಸೌಜನ್ಯ ಪ್ರಕರಣದ ರಹಸ್ಯಗಳನ್ನ ಬಿಚ್ಚಿಟ್ಟರೆ ನನ್ನನ್ನು ಸಾಯಿಸ್ತಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸೌಜನ್ಯ ಪ್ರಕರಣವನ್ನ ದಾರಿ ತಪ್ಪಿಸಲಾಗಿದೆ ಅನ್ನೋದಕ್ಕೆ ಆ ಕ್ಷೇತ್ರದ ಮಾಜಿ ಶಾಸಕನಿಂದಲೇ ಪುಷ್ಟಿ ನಾನು ಶಾಸಕನಾಗಿದ್ದಾಗ ಅಧಿವೇಶನದಲ್ಲಿ ಸೌಜನ್ಯ ಕೇಸ್ ಸಿಬಿಐಗೆ ವಹಿಸಲು ಆಗ್ರಹಿಸಿದ್ದೆ,ಸಿದ್ದರಾಮಯ್ಯನವರೂ ಕೆಲವರನ್ನ ತುಂಬಾ ಒಳ್ಳೆಯವರು ಎಂದು ನಂಬಿದ್ದರು,ನನ್ನನ್ನ ಕರೆದು ಹೇಳಿದ್ರು ಇದನ್ನ ಪ್ರಸ್ತಾಪ ಮಾಡಬೇಡ ಈ ಕೇಸನ್ನ ಸಿಬಿಐಗೆ ವಹಿಸಲು ಸಾಧ್ಯವಿಲ್ಲ ಎಂದರು ,ನಾನು ಸುಮಾರು ಒಂದೂ ಗಂಟೆಗೂ ಅಧಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೆ,ಕೇವಲ ಸೌಜನ್ಯ ಪ್ರಕರಣ ಮಾತ್ರವಲ್ಲ ಬೆಳ್ತಂಗಡಿಯಲ್ಲಿ ನಡೆದ ಅಮಾನುಷ ಹತ್ಯೆಗಳ ಬಗ್ಗೆ ಅವರಿಗೆ ತಿಳಿಸಿದ್ದೆ,ಕೊನೆಗೆ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಸೌಜನ್ಯ ಪ್ರಕರಣವನ್ನ ಸಿಬಿಐಗೆ ವಹಿಸಿದೆ ಎಂದರು’

‘ಸಿಬಿಐ ತನಿಖೆಯಲ್ಲಿ ನ್ಯಾಯ ಸಿಗುತ್ತೆ ಎಂಬ ನಂಬಿಕೆ ನನಗಿತ್ತು,ಆದರೆ ಸಿಬಿಐ ತನಿಖೆಯ ಅರ್ಧದಲ್ಲಿ ಇದರಲ್ಲಿ ಮೋಸ ಇದೆ ಎನ್ನೋದು ನನಗೆ ತಿಳಿಯಿತು,ಅದನ್ನ ಸಾರ್ವಜನಿಕವಾಗಿ ನಿಮ್ಮ ಮುಂದೆ ಹೇಳಲು ಸಾಧ್ಯವಿಲ್ಲ,ಆದರೆ ಸಂದರ್ಭ ಬಂದಾಗ ನಾನು ಪ್ರಸ್ತಾಪಿಸಿಯೇ ಸಿದ್ಧ,ಒಂದಲ್ಲ ಒಂದು ದಿನ ಒಂದು ದಿನ ಕಾಲ ಬರುತ್ತೆ,ಆವತ್ತು ಸೌಜನ್ಯ ಪ್ರಕರಣದ ದಿಕ್ಕು ತಪ್ಪಿಸಿದ್ದು ಯಾರು, ಅನ್ಯಾಯ ತೊಂದರೆ ಕೊಟ್ಟಿದ್ದು ಯಾರು ಎಂದು ಹೇಳುತ್ತೇನೆ,ಆದರೆ ನನ್ನನ್ನು ಸಾಯಿಸಿದ್ರೂ ಸಾಯಿಸಬಹುದು,ಅಂತೂ ನನ್ನ ಅಂತ್ಯದೊಳಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಿಯೇ ಸಿದ್ಧ,ಸಿದ್ದರಾಮಯ್ಯನವರನ್ನ ಏಕಾಂಗಿಯಾಗಿ ಭೇಟಿಯಾಗಿ ಈ ಪ್ರಕರಣವನ್ನ ಹೇಗೆ ತನಿಖೆ ಮಾಡಬೇಕೆಂಬುದನ್ನ ಹೇಳುತ್ತೇನೆ,ಇದನ್ನ ಈ ರೀತಿ ತನಿಖೆ ಮಾಡಬೇಕು, ಇಂತವರನ್ನೇ ತನಿಖೆ ಮಾಡಬೇಕು ಎಂದು ಹೇಳುತ್ತೇನೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಖಾಕಿಯವರನ್ನೂ ಕೈ ಕಾಲು ಕಟ್ಟಿ ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯನವರಿಗೆ ತಿಳಿಸುತ್ತೇನೆ,ತಪ್ಪು ಮಾಡಿದವನೂ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಅದನ್ನ ಅನುಭವಿಸಲೇ ಬೇಕು,ಒಗ್ಗಟ್ಟಾಗಿ ಸೌಜನ್ಯ ವಿರುದ್ಧವಾದ ದೌರ್ಜನ್ಯ ಹಾಗೂ ಕೊಲೆ ವಿರುದ್ದ ದೇಶವ್ಯಾಪಿಯಾಗಿ ಪ್ರತಿಭಟನೆಯಾಗುತ್ತೆ,ಸೌಜನ್ಯ ಕುಟುಂಬಸ್ಥರನ್ನ ಮುಖ್ಯಮಂತ್ರಿಗಳಿಗೆ ಖುದ್ದು ನಾನೇ ಭೇಟಿ ಮಾಡಿಸಿದ್ದೇನೆ,ಮುಖ್ಯಮಂತ್ರಿಗಳಿಗೂ ಸೌಜನ್ಯ ಪ್ರಕರಣದ ಗಂಭೀರತೆ ಅರಿವಿಗೆ ಬಂದಿದೆ’

ಸಿಬಿಐ ತನಿಖೆಯ ದಾರಿ ತಪ್ಪಿಸಿದ ಉದ್ದೇಶದಿಂದ ಈ ಕೇಸಿನ ಸಾಕ್ಸ್ಯ ನಾಶವಾಯಿತು ,ಈ ಹೇಳಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಾರಿ ಸಂಚಲನಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular