ಬೆಳ್ತಂಗಡಿ : ಶಾಲಾ ಮಕ್ಕಳಿದ್ದ ಬಸ್ ಸ್ಟಾಂಡ್ ಬಳಿ ಒಂಟಿ ಸಲಗ ನುಗ್ಗಿದ ಕಾರಣ ವಿದ್ಯಾರ್ಥಿಗಳು ದಿಕ್ಕು ಪಾಲಾಗಿ ಓಡಿಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಳಿ ನಡೆದಿದೆ.
ಧರ್ಮಸ್ಥಳ ಗ್ರಾಮದ ಬೊಳಿಯಾರು ಬಸ್ ಸ್ಟಾಂಡ್ ಬಳಿ ಈ ಘಟನೆ ನಡೆದಿದ್ದು ವಿದ್ಯಾರ್ಥಿಗಳು ಪಕ್ಕದಲ್ಲೇ ಇದ್ದ ಅಂಗಡಿಗೆ ಓಡಿ ಹೋಗಿ ಬಚಾವ್ ಆಗಿದ್ದಾರೆ. ಕೆಲವು ಹೊತ್ತು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು ಬಳಿಕ ಕಾಡಾನೆ ವಾಪಾಸಾಗಿದೆ.


