Friday, March 13, 2026
Flats for sale
Homeಜಿಲ್ಲೆಬೆಳ್ತಂಗಡಿ : ಬಸ್-ಟ್ಯಾಂಕರ್ ನಡುವೆ ಅಪಘಾತ, 20 ಮಂದಿಗೆ ಗಾಯ.

ಬೆಳ್ತಂಗಡಿ : ಬಸ್-ಟ್ಯಾಂಕರ್ ನಡುವೆ ಅಪಘಾತ, 20 ಮಂದಿಗೆ ಗಾಯ.

ಬೆಳ್ತಂಗಡಿ ; ತಾಲೂಕಿನ ಮಾರುಕಟ್ಟೆ ಪ್ರದೇಶದ ಅಯ್ಯಪ್ಪ ಗುಡಿ ಬಳಿ ಖಾಸಗಿ ಬಸ್ಸೊಂದು ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ 20 ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಖಾಸಗಿ ಬಸ್ ಬೆಳ್ತಂಗಡಿಯಿಂದ ಕಾರ್ಕಳಕ್ಕೆ ತೆರಳುತ್ತಿದ್ದು, ಟ್ಯಾಂಕರ್ ಗುರುವಾಯನಕೆರೆಯಿಂದ ಬೆಳ್ತಂಗಡಿಗೆ ತೆರಳುತ್ತಿತ್ತು. ಅದೃಷ್ಟವಶಾತ್ ಟ್ಯಾಂಕರ್ ಸೋರಿಕೆಯಾಗದ ಕಾರಣ ಭಾರೀ ಅನಾಹುತ ತಪ್ಪಿದೆ. ಗಾಯಗೊಂಡವರಲ್ಲಿ ಬಸ್ ಚಾಲಕ ಅರುಣ್ ಕುಮಾರ್, ಕಂಡಕ್ಟರ್ ಅಬೂಬಕರ್, ಟ್ಯಾಂಕರ್ ಚಾಲಕ ಸುಂದರ ಗೌಡ, ಪ್ರಯಾಣಿಕರಾದ ಕಾರ್ತಿಕ್, ಅಬ್ದುಲ್ ರಹಿಮಾನ್, ಯಶೋದಾ, ವಿಜಯಾ, ವಾಸಂತಿ, ಪ್ರೀತಿ, ಮಮತಾ, ಕಲ್ಯಾಣಿ, ಪದ್ಮಾವತಿ, ರಾಘವೇಂದ್ರ, ನಾರಾಯಣ ಕುಲಾಲ್, ನಾಗೇಶ್ ಹೆಗಡೆ, ಶಮೀನಾ, ಶೈಮಾ, ಮತ್ತು ನಾರಾಯಣ ನಾಯ್ಕ ಎಂದು ತಿಳಿದುಬಂದಿದೆ.

ಡಿಕ್ಕಿಯ ರಭಸಕ್ಕೆ ಬಸ್ 10 ಮೀಟರ್ ಹಿಂದಕ್ಕೆ ಬಸ್ ಸರಿದಿದ್ದು ಆಟೋ ರಿಕ್ಷಾಕ್ಕೂ ಡಿಕ್ಕಿ ಹೊಡೆದಿದೆ. ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular