Saturday, July 18, 2026
Homeಜಿಲ್ಲೆಬೆಳ್ತಂಗಡಿ ; ನಕ್ಸಲ್ ಕರಪತ್ರ ಹಚ್ಚಿದ್ದ ಪ್ರಕರಣ ; ವಾಟೆಂಡ್ ನಕ್ಸಲ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು.

ಬೆಳ್ತಂಗಡಿ ; ನಕ್ಸಲ್ ಕರಪತ್ರ ಹಚ್ಚಿದ್ದ ಪ್ರಕರಣ ; ವಾಟೆಂಡ್ ನಕ್ಸಲ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು.

ಬೆಳ್ತಂಗಡಿ : ನಕ್ಸಲ್ ಕರಪತ್ರ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ
ನಕ್ಸಲ್ ಜಾನ್@ ಜಯಣ್ಣ@ಮಹೇಶ್ (49) ಎಂಬಾತನನ್ನು ಕೇರಳದ ತ್ರೀಶೂರ್ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಕೇರಳ ವಿಶೇಷ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

2012 ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ಲೂರು ಎಂಬಲ್ಲಿ ಕೊತ್ಲೂರಿನ ಲಿಂಗಪ್ಪ ಮಲೆಕುಡಿಯ ಮನೆಯ ಅಂಗಳದಲ್ಲಿ ಕರಪತ್ರ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಿಚೆಗೆ ಪ್ರಕರಣದ ಮರು ತನಿಖೆಗೆ ನ್ಯಾಯಾಲಯ ಆದೇಶ ಹೊರಡಿಸಿತ್ತು

ಮೂಲಃತ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮದ ನಿವಾಸಿ ಜಯಣ್ಣ ಕಳೆದ ಆರು ತಿಂಗಳಿಂದ ಕೇರಳ ಜೈಲಿನಲ್ಲಿದ್ದರು.ರಾಜ್ಯದ ಸಿಎಂ ಮುಂದೆ ಇತ್ತಿಚೆಗೆ ಶರಣಾತಿಯಾಗಿದ್ದ ಜಯಣ್ಣನನ್ನು ಕೇರಳ ಪೋಲಿಸರು ಬೆಳ್ತಂಗಡಿ
ನ್ಯಾಯಾಲಯದಲ್ಲಿ ಹಾಜರಾತಿಗಾಗಿ ಕರೆತಂದಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular