Thursday, September 18, 2025
Flats for sale
Homeಜಿಲ್ಲೆಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣ : ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಮಹೇಶ್ ಶೆಟ್ಟಿ ತಿಮರೋಡಿ...

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣ : ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಮಹೇಶ್ ಶೆಟ್ಟಿ ತಿಮರೋಡಿ ಆಶ್ರಯ ನೀಡಿದ ಆರೋಪ : ಬೆಳ್ಳಂಬೆಳಗ್ಗೆ ಮನೆ ಮೇಲೆ ಎಸ್ ಐ ಟಿ ದಾಳಿ..!

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಶವಗಳು ಹೂತಿಟ್ಟ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಬಂಧನಕ್ಕೊಳಗಾಗಿ ಬೈಲ್ ಮೇಲೆ ಬಂದಿದ್ದ ಮಹೇಶ್ ಶೆಟ್ಟಿ ತಿಮರೋಡಿ ಗೆ ನಿದ್ದೆ ಮಂಪರಿನಲ್ಲಿರುವಾಗ SIT ಬಿಗ್ ಶಾಕ್ ಕೊಟ್ಟಿದೆ.

ಬೇಲ್ ಮೇಲೆ ಹೊರ ಬಂದಿರುವ ತಿಮರೋಡಿಗೆ ಬಿಸಿಮುಟ್ಟಿಸಿದ್ದು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ SIT ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿ ಚಿನ್ನಯ್ಯನನ್ನು ಜೊತೆ ವಿಶೇಷ ತನಿಖಾ ತಂಡ ಕರೆತಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಉಜಿರೆಯಲ್ಲಿರುವ ತಿಮರೋಡಿ ನಿವಾಸಕ್ಕೆ SIT ಟೀಂ ಎಂಟ್ರಿ ಕೊಟ್ಟು ತನಿಖೆ ನಡೆಸುತ್ತಿದೆ.

ಶವಗಳನ್ನು ಹೂತಿದ್ದೇನೆ ಎಂದುಕೊಂಡು ಸಾಕ್ಷಿದಾರನಾಗಿ ಬಂದಿದ್ದ ಚಿನ್ನಯ್ಯನನ್ನು ಬಂಧಿಸಿ ವಶದಲ್ಲಿಟ್ಟುಕೊಂಡಿರುವ ಎಸ್​​ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಪರಿಣಾಮವಾಗಿ ಒಂದೊಂದೇ ಅಸಲಿಯತ್ತು ಬಯಲಾಗತೊಡಗಿದೆ. ಆತನನ್ನು ಎರಡು ದಿನಗಳಿಂದದ ಬೆಂಡಿತ್ತಿರುವ ಎಸ್ಐಟಿ ವಿಚಾರಣೆ ತೀವ್ರಗೊಳಿಸಿದೆ. ಈಗಾಗಲೇ ಎಲ್ಲಾ ಸತ್ಯವನ್ನು ಕಕ್ಕಿರುವ ಚಿನ್ನಯ್ಯ, ಎಸ್‌ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸ್ತಿದ್ದಾನೆ. ಮೊದಲಿಗೆ ದೆಹಲಿ ಲಿಂಕ್ ಕೆದಕಿದ್ದ ಎಸ್ಐಟಿ ಇದೀಗ ಮಂಡ್ಯ, ತಮಿಳುನಾಡಿನಲ್ಲಿ ಆತನಿಗಿದ್ದ ಲಿಂಕ್​ ಪತ್ತೆ ಮಾಡಿದೆ.

ಬುರುಡೆಯನ್ನು ನಾನೇ ಅಗೆದು ತಂದೆ ಎಂದು ಕೋರ್ಟ್‌ ಮುಂದೆ ಹೇಳಿದ್ದ ಚಿನ್ನಯ್ಯ ಶನಿವಾರದ ವಿಚಾರಣೆ ವೇಳೆ, ‘ನಾನು ಅಗೆದು ತಂದಿಲ್ಲ’ ಎಂದಿದ್ದ. ಈ ಗೊಂದಲಕಾರಿ ಹೇಳಿಕೆ ನೀಡಿದ್ದರಿಂದಲೇ ಪೊಲೀಸರು ಆತನನ್ನು ಲಾಕ್ ಮಾಡಿದ್ದರು. ಬುರುಡೆ ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ಸೋಮವಾರ ತೀವ್ರ ವಿಚಾರಣೆ ನಡೆಸಲಾಗಿದ್ದು, ಚಿನ್ನಯ್ಯ ಹಲವು ವಿಚಾರಗಳನ್ನ ಬಯಲು ಮಾಡಿದ್ದಾನೆ. ಚಿನ್ನಯ್ಯಗೆ ಹೋರಾಟಗಾರ ಮಹೇಶ್ ತಿಮರೋಡಿ ಆಶ್ರಯ ನೀಡಿದ್ದರು ಎನ್ನಲಾಗಿದ್ದು, ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

Most Popular