Saturday, July 12, 2025
Flats for sale
Homeರಾಜ್ಯಬೆಳಗಾವಿ : ಮೂರೇ ತಿಂಗಳಲ್ಲಿ ಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ 3.81ಕೋಟಿ ಕಾಣಿಕೆ ಸಂಗ್ರಹ..!

ಬೆಳಗಾವಿ : ಮೂರೇ ತಿಂಗಳಲ್ಲಿ ಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ 3.81ಕೋಟಿ ಕಾಣಿಕೆ ಸಂಗ್ರಹ..!

ಬೆಳಗಾವಿ : ಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಉತ್ತರ ಕರ್ನಾಟಕದ ಶಕ್ತಿದೇವಿಗೆ ಕಾಣಿಕೆ ಕೇವಲ ಮೂರೇ ತಿಂಗಳಲ್ಲಿ 3.81ಕೋಟಿ ಕಾಣಿಕೆ ಹರಿದುಬಂದಿದೆ.

2025ರ ಏಪ್ರಿಲ್ 1ರಿಂದ ಜೂನ್ 30ರ ಅವಧಿಯಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ಹಣ, ಚಿನ್ನಾಭರಣ, ಬೆಳ್ಳಿ ಆಭರಣಗಳ ಎಣಿಕೆಯಾಗಿದ್ದು 2023ರಲ್ಲಿ ಇದೇ ಅವಧಿಯಲ್ಲಿ 1.65ಕೋಟಿ, 2024ರಲ್ಲಿ ಈ ಅವಧಿಯಲ್ಲಿ 1.96ಕೋಟಿ ಕಾಣಿಕೆ ಸಂಗ್ರಹವಾಗಿತ್ತು ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ದುಪ್ಪಟ್ಟು ಕಾಣಿಕೆ ಸಂಗ್ರಹವಾಗಿದೆ.

3.81ಕೋಟಿಯಲ್ಲಿ 3.39 ಕೋಟಿ ನಗದು, 32.94 ಲಕ್ಷ ಮೌಲ್ಯದ 340 ಗ್ರಾಂ ಚಿನ್ನಾಭರಣ, 9.79 ಲಕ್ಷದ 8.7 ಕೆಜಿ ಬೆಳ್ಳಿ ಆಭರಣ ಭಕ್ತರು ಅರ್ಪಿಸಿದ್ದು ವಿವಿಧ ಸುಧಾರಣಾ ಕ್ರಮ ಅನುಸರಿಸಿದ್ದರಿಂದ ದೇವಸ್ಥಾನದ ಆದಾಯ ಹೆಚ್ಚಾಗಿದೆ.ಈ ಹಣವನ್ನ ಅಭಿವೃದ್ಧಿ ಕೆಲಸಕ್ಕೆ ಬಳಸುವುದಾಗಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ದುಡಗುಂಟಿ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular