ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕ ಸೋಮು,ತಹಶಿಲ್ದಾರ ಬಸವರಾಜ್ ನಾಗರಾಳ್ ಎಂದು ಸಂಜೆ ತಹಶಿಲ್ದಾರ ಕಚೇರಿ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಮೆಸೆಜ್ ಹಾಕಿ ಕಚೇರಿಯಲ್ಲಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಸಿಬ್ಬಂದಿಯನ್ನು ರುದ್ರಣ್ಣ ಯಡವಣ್ಣವರ (35) ಎಂದು ಗುರುತಿಸಲಾಗಿದೆ. ಬೆಳಗಾವಿ ತಹಶಿಲ್ದಾರ ಕೊಠಡಿಯಲ್ಲಿಯೇ SDA ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರು ನಿನ್ನೆಯಷ್ಟೆ ಸವದತ್ತಿ ತಹಶಿಲ್ದಾರ ಕಚೇರಿಗೆ ವರ್ಗಾವಣೆಗೊಂಡಿದ್ದರು.
ನನ್ನ ಸಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕನಾಗಿರೋ ಸೋಮು ಕಾರಣ ಎಂದು ಗ್ರೂಪಿನಲ್ಲಿ ಮೆಸೆಜ್ ಹಾಕಿದ್ದು ನಮ್ಮ ಕಚೇರಿಯಲ್ಲಿ ತುಂಬ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಮೆಸೆಜ್ ಫಾರ್ವರ್ಡ್ ಮಾಡಿದ್ದಾರೆ.
ಬೆಳಗಾವಿ ತಹಶಿಲ್ದಾರ ಕಚೇರಿಗೆ ಮೃತ SDA ರುದ್ರೇಶ ಯಡವಣ್ಣವರ ತಾಯಿ ಮಲ್ಲಮ್ಮ ರುದ್ರೇಶ ಪತ್ನಿ ಗಿರೀಜಾ ಆಗಮಿಸಿದ್ದು ಮೃತದೇಹವನ್ನು ನೋಡಿ ಕಣ್ಣೀರು ಹಕ್ಕಿ ಅಸ್ವಸ್ಥಗೊಂಡಿದ್ದಾರೆ. ಕಚೇರಿಯಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲುಮುಟ್ಟಿದ್ದು ಅಸ್ವಸ್ಥರಾದ ಮೃತ ರುದ್ರೇಶ್ ಪತ್ನಿಯನ್ನ ಆಸ್ಪತ್ರೆ ಗೆ ರವಾನಿಸಲಾಗಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ಮೃತದೇಹವನ್ನ ಪೊಲೀಸರು ಕೆಳಗಿಳಿಸಿದ್ದು ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.