ಬೆಳಗಾವಿ : ಬೆಳಗಾವಿಯಲ್ಲಿ ಮತ್ತೊಂದು ಫೈನಾನ್ಸ್ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದಾಗಲೇ ಫೈನಾನ್ಸ್ ಸಿಬ್ಬಂದಿಮನೆ ಸೀಜ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ.
ಇಕ್ವಿಟಾಸ್ ಫೈನಾನ್ಸ್ ಕಂಪನಿಯಿಂದ ಯಲ್ಲವ್ವ ಬಸಪ್ಪ ಕುರಕುಂದ ಎಂಬುವವರು ಐದು ವರ್ಷದ ಹಿಂದೆ ಎಂಟು ಲಕ್ಷ ಸಾಲ ಪಡೆದಿದ್ದರು,ಈ ವರೆಗೂ 9 ಲಕ್ಷ ಹಣ ಕಟ್ಟಿದ್ದ ಬಸಪ್ಪ. ಮತ್ತೆ ನಾಲ್ಕು ಲಕ್ಷ ಹಣ ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿಗಳು ಒತ್ತಾಯಿಸಿದ್ದರು. ಎರಡು ಲಕ್ಷ ಕಟ್ಟುತ್ತೇವೆ ಎಂದು ಬಸಪ್ಪ ಅಂಗಲಾಚಿದ್ದು ಇದಕ್ಕೆ ಒಪ್ಪದ ಸಿಬ್ಬಂದಿ ಇಂದು ಏಕಾಏಕಿ ಬಂದು ಮನೆ ಸೀಜ್ ಮಾಡಿದ್ದಾರೆ . ಜಮೀನಿಗೆ ಹೋದಾಗಲೇ ಮನೆ ಸೀಜ್ ಮಾಡಿದ್ದು ಬಸಪ್ಪ ಕುರಕುಂದ ರವರ ಕುಟುಂಬ ಬೀದಿಗೆ ಬಂದಿದೆ. ಬಟ್ಟೆ, ಅಡುಗೆ ಸಾಮಾಗ್ರಿ ಸೇರಿ ಎಲ್ಲವೂ ಮನೆಯಲ್ಲೇ ಇದ್ದು. ತಿನ್ನಲು ಕೂಡ ಎನೂ ಇಲ್ಲ ಸಂಪೂರ್ಣವಾಗಿ ಎಂದು ಇಲ್ಲದೆ ಬೀದಿಗೆ ಬಂದಿದ್ದಾರೆ. ಮನೆ ಸೀಜ್ ಹಿನ್ನೆಲೆ ಪತಿ, ಪತ್ನಿ ಕಣ್ಣೀರಿಡುತ್ತಿದ್ದು ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.ರಾಜ್ಯ ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕದಿದ್ದರೆ ಮುಂದೊಂದು ದಿನ ಎಲ್ಲಾ ಹಳ್ಳಿಗಳಲ್ಲಿ ಬಡವರು ಬೀದಿಗೆ ಬರುತ್ತಾರೆಂದು ಸ್ಥಳೀಯ ನಿವಾಸಿ ರಾಮಪ್ಪ ತಿಳಿಸಿದ್ದಾರೆ .