ಬೆಳಗಾವಿ : ಸುಕ್ಷೇತ್ರ ಬಂಡಿಗಣಿ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ.
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸುಕ್ಷೇತ್ರ ಬಂಡಿಗಣಿ ಮಠ ಸ್ವಾಮೀಜಿಯವರು ಅನಾರೋಗ್ಯದ ಹಿನ್ನಲೆ ಕಳೆದ ನಾಲ್ಕು ದಿನಗಳಿಂದ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡ ರಾತ್ರಿ ಸ್ವಾಮೀಜಿ ನಿಧನರಾಗಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ಸ್ವಾಮೀಜಿಯವರು ಲಕ್ಷಾಂತರ ಭಕ್ತರನ್ನು ಹೊಂದಿದ್ದುನೂರಾರು ಕಡೆಗಳಲ್ಲಿ ಅನ್ನದಾನ ಮೂಲಕ ದಾನೇಶ್ವರ ಎಂದೇ ಸ್ವಾಮೀಜಿಯವರು ಪ್ರಸಿದ್ಧರಾಗಿದ್ದರು.


