ಬೆಳಗಾವಿ : ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ಜಲವಿವಾದ ನ್ಯಾಯಾಧಿಕರಣಗಳ ವಿಚಾರಣೆ ಸಮಯದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಲು ಹಾಜರಾಗಿದ್ದ ವಕೀಲರುಗಳಿಗೆ ಶುಲ್ಕವಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ ಬರೋಬ್ಬರಿ 122,75,95,882 ರೂ. ಪಾವತಿಸಿರುವ ಅಂಶವು ಜಲಸಪಂ ಪನ್ಮೂಲ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿಯಿಂದ ಬೆಳಕಿಗೆ ಬಂದಿದೆ.
ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಅವರು ಈ ಕುರಿತಂತೆ ಮಾಧ್ಯಮಗಳಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ರಾಜ್ಯದ ಪರವಾಗಿ ವಾದ ಮಂಡಿಸಲು ನೇಮಕ ಮಾಡಿಕೊಂಡಿರುವ ವಕೀಲರಲ್ಲಿ ಹೆಚ್ಚಿನ ಸಂಖ್ಯೆಯ ವಕೀಲರು ಕೇರಳ, ತಮಿಳನಾಡು ಮತ್ತು ಪುದುಚೇರಿ ಮೂಲದ ವರಾಗಿದ್ದಾರೆ. ಇವರು ರಾಜ್ಯದ ಸದ್ಯದ ನೀರಿನ ವಾಸ್ತವತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿ ದ್ದಾರೆಂದು ಗಡಾದ್ ಆರೋಪಿಸಿದ್ದಾರೆ.
ಕಾವೇರಿ ನ್ಯಾಯಾಧಿಕರಣ ಕರ್ನಾಟಕ, ತಮಿಳನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವೆ ಉದ್ಭವಿಸಿದ ಅಂತರಾಜ್ಯ ಜಲವಿವಾದದ ಇತ್ಯರ್ಥಕ್ಕಾಗಿ 1990 ಜೂನ್ 2 ರಂದು ಕಾವೇರಿ ಜಲವಿವಾದ ನ್ಯಾಯಾಧಿಕರಣವನ್ನು ರಚಿಸಲಾಗಿದೆ. ಪ್ರಾರಂಭದಿದಿಂದ 2017 ಜುಲೈ 10 ರವರೆಗೆ ಒಟ್ಟು 540 ಸಿಟ್ಟಿಂಗ್ಗಳು ನಡೆದ್ತಿವೆ ಮತ್ತು ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರ ಶುಲ್ಕವಾಗಿ 54,13,21,282 ರೂ.ಗಳನ್ನು ಪಾವತಿಸಲಾಗಿದೆ. ಕೃಷ್ಣಾ ನ್ಯಾಯಾಧಿಕರಣ ಕರ್ನಾಟಕ, ಮಹಾರಾಷ್ಟç ಮತ್ತು ಆಂಧ್ರಪ್ರದೇಶಗಳ ರಾಜ್ಯಗಳ ನಡುವೆ ಉದ್ಭವಿಸಿದ ಅಂತರಾಜ್ಯ ಜಲವಿವಾದದ ಇತ್ಯರ್ಥಕ್ಕಾಗಿ 2004 ಏ. 2 ರಂದು ಕೃಷ್ಣಾ ಜಲವಿವಾದ ನ್ಯಾಯಾಧಿಕರಣವನ್ನು ರಚಿಸಲಾಗಿದೆ. ಪ್ರಾರಂಭದಿAದ 2013 ನ. 29 ರವರೆಗೆ ಒಟ್ಟು 295 ಸಿಟ್ಟಿಂಗ್ಗಳು ನಡೆದಿವೆ. ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರಿಗೆ 43,24,39,000 ರೂ. ಶುಲ್ಕ ಪಾವತಿಸಲಾಗಿದೆ.
ಮಹದಾಯಿ ನ್ಯಾಯಾಧಿಕರಣ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟç ರಾಜ್ಯಗಳ ನಡುವೆ ಉದ್ಭವಿಸಿದ ಅಂತರಾಜ್ಯ ಜಲವಿವಾದದ ಇತ್ಯರ್ಥಕ್ಕಾಗಿ 2010 ನ. 16 ರಂದು ಮಹದಾಯಿ ಜಲವಿವಾದ ನ್ಯಾಯಾಧಿಕರಣವನ್ನು ರಚಿಸಲಾಗಿದೆ. ಪ್ರಾರಂಭದಿAದ2017 ಡಿಸೆಂಬರ್À 1 ರವರೆಗೆ ಒಟ್ಟು 97 ಸಿಟ್ಟಿಂಗ್ಗಳು ನಡೆದಿವೆ ಮತ್ತು ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರ ಶುಲ್ಕಕ್ಕಾಗಿ 25,38,35,600 ರೂ. ವೆಚ್ಚ ಮಾಡಲಾಗಿದೆ.


