ಬೆಳಗಾವಿ : ಈ ರಾಜಕೀಯನೇ ಇಷ್ಟು ಎಲ್ಲಿ ಯಾವಾಗ ಪಕ್ಷ ಬದಲಾಯಿಸುತ್ತಾರೋ ಗೊತ್ತಿಲ್ಲ.ಕಾಂಗ್ರೆಸ್ ನಿಂದ ಬಿಜೆಪಿಗೆಘರ್ ವಾಪಸಿ' ಸುದ್ದಿಯಲ್ಲಿರುವಾಗಲೇ ಲಕ್ಷ್ಮಣ ಸವದಿ ಸೇರಿದಂತೆ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಶಾಸಕರು ಬೆಳಗಾವಿಯಲ್ಲಿಂದು ನಡೆದಗ್ಯಾರಂಟಿ’ ಸಮಾವೇಶಕ್ಕೆ ಗೈರಾಗಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಗಡಿನಾಡಲ್ಲಿ ನಡೆದ ಪ್ರಥಮ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶಕ್ಕೆ ಕಾಂಗ್ರೆಸ್ನ ಎಲ್ಲ ಶಾಸಕರು ಹಾಜರಾಗುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಇಬ್ಬರು ಸಚಿವರು ಸೇರಿದಂತೆ ಬೆಳಗಾವಿಯ ರಾಜು ಶೇಠ, ಕಿತ್ತೂರಿನ ಬಾಬಾಸಾಹೇಬ ಪಾಟೀಲ, ಸವದತ್ತಿಯ ವಿಶ್ವಾಸ ವೈದ್ಯ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ ಮಾತ್ರ ಸಮಾವೇಶದಲ್ಲಿ ಕಾಣಿಸಿಕೊಂಡರು. ಇನ್ನುಳಿದವರು ಸಮಾವೇಶದತ್ತ ಸುಳಿಯಲೂ ಇಲ್ಲ. ಹೀಗಾಗಿ ವೇದಿಕೆಯಲ್ಲಿ
ಅಧಿಕಾರಿಗಳೇ ಹೆಚ್ಚಾಗಿ ಎದ್ದು ಕಂಡರು.
ಸವದಿ ಏಕೆ ಬರಲಿಲ್ಲ..?:
ಗ್ಯಾರಂಟಿ ಸಮಾವೇಶದಲ್ಲಿ ಸವದಿ ಗೈರು ಹಾಜರಿ ಎದ್ದು ಕಂಡಿತು. ಇಲ್ಲಿ ಉಳಿದ ಶಾಸಕರು ಏಕೆ ಬರಲಿಲ್ಲ ಎನ್ನುವುದಕ್ಕಿಂತ ಘರ್ ವಾಪಸಿ ಸುದ್ದಿಯಲ್ಲಿರುವ ಲಕ್ಷ್ಮಣ ಸವದಿ ಬರಲಿಲ್ಲ ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಯಿತು. ಲಕ್ಷ್ಮಣ ಸವದಿ ಅವರು ಇಂದು ಅಥಣಿಯಲ್ಲಿಯೇ ಇದ್ದರು, ಆದರೆ ಅವರು ಪೂರ್ವ ನಿಗದಿಯಂತೆ ಅಲ್ಲಿನ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದರು ಎಂದು ಗೊತ್ತಾಗಿದೆ.
ಇದರ ಜೊತೆಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಗಿಟ್ಟಿಸಿದ ಬೈಲಹೊಂಗಲದ ಮಹಾAತೇಶ ಕೌಜಲಗಿ ಮತ್ತು ಕಾಗವಾಡ ಶಾಸಕ ರಾಜು ಕಾಗೆ ಅವರೂ ಗೈರಾಗಿದ್ದರು.
ವಾಪಸ್ ಬರುವುದು ಪಕ್ಕಾನಾ…?: ಇದೆಲ್ಲದರ ಮಧ್ಯೆ ಅಥಣಿಯ ಲಕ್ಷ್ಮಣ ಸವದಿ ಅವರು ಘರ್ ವಾಪಸಿ ಪಕ್ಕಾ ಎನ್ನುವ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಬಿಜೆಪಿ ಹೈಕಮಾಂಡ್ಕೂ ಡ ಸವದಿ ಅವರನ್ನು ಹೇಗಾದರೂ ಮಾಡಿ ಪಕ್ಷಕ್ಕೆ ಕರೆತರಬೇಕು ಎನ್ನುವ ನಿಟ್ಟಿನಲ್ಲಿ ಕಸರತ್ತು ನಡೆಸಿದೆ. ಇದೆಲ್ಲದರ ಜೊತೆಗೆ ಸವದಿ ಅವರು ಲೋಕ ಸಮರಕ್ಕೆ ಬಾಗಲಕೋಟೆಯಿಂದ ಕಣಕ್ಕಿಳಿಯಬಹುದು ಎನ್ನುವ ಮಾತುಗಳುಕೇಳಿ ಬರುತ್ತಿವೆ.
ಈ ನಿಟ್ಟಿನಲ್ಲಿ ಕಳೆದ ಮೂರು ತಿಂಗಳ ಹಿAದೆಯಷ್ಟೇ ಅಲ್ಲಿನ ಪ್ರಮುಖರ ನಿವಾಸದಲ್ಲಿ ಗೌಪ್ಯ ಸಭೆಯೊಂದು ಕೂಡ ನಡೆದಿತ್ತು ಎಂದು ಗೊತ್ತಾಗಿದೆ. ಗಾಣಿಗ ಸಮಾಜದ ಮತದಾರರೇ ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಬಿಜೆಪಿ ಹೈಕಮಾಂಡ್ ಸವದಿ ಅವರನ್ನು ಬಾಗಲಕೋಟೆಯಿಂದ ಕಣಕ್ಕಿಳಿಸುವ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.


