Thursday, March 12, 2026
Flats for sale
Homeರಾಜ್ಯಬೆಳಗಾವಿ : ಗೃಹಲಕ್ಷ್ಮಿ ಹಣದಲ್ಲಿ ಗಂಡನ ಕಣ್ಣಿನ ಆಪರೇಷನ್ ಮಾಡಿಸಿದ ಪತ್ನಿ..!

ಬೆಳಗಾವಿ : ಗೃಹಲಕ್ಷ್ಮಿ ಹಣದಲ್ಲಿ ಗಂಡನ ಕಣ್ಣಿನ ಆಪರೇಷನ್ ಮಾಡಿಸಿದ ಪತ್ನಿ..!

ಬೆಳಗಾವಿ : ಕಣ್ಣಿನ ಆಪರೇಷನ್ ಗೆ ಗೃಹಲಕ್ಷ್ಮಿ ಹಣವನ್ನು ಬಳಕೆಮಾಡಿದ ಘಟನೆ ವರದಿಯಾಗಿದೆ. ಕಾಂಗ್ರೆಸ್​ ಸರ್ಕಾರದ ಗೃಹಲಕ್ಷ್ಮಿ ಹಣದಿಂದ ಮಹಿಳೆಯೊಬ್ಬರು ಪತಿಯ ಕಣ್ಣಿನ ಆಪರೇಷನ್ ಮಾಡಿಸಿದ ಘಟನೆ ಬೆಳಗಾವಿಯ ಅನಗೋಳ ನಗರದಲ್ಲಿ ನಡೆದಿದೆ.

ಅನಿತಾ ಎಂಬ ಮಹಿಳೆಯ ಪತಿ ಚಂದ್ರಶೇಖರ್ ದೃಷ್ಟಿದೋಷದಿಂದ ಬಳಲುತ್ತಿದ್ದು ವೈದ್ಯರು ಆಪರೇಷನ್​ ಮಾಡಿಸಲು ತಿಳಿಸಿದ್ದರು. ಗೃಹಲಕ್ಷ್ಮಿಯಿಂದ ಬಂದ 18 ಸಾವಿರ ಹಣ ಹಾಗೂ ತನ್ನ ಬಳಿ ಇದ್ದ 10 ಸಾವಿರ ಹಣ ಸೇರಿಸಿ ಪತಿ ಚಂದ್ರಶೇಖರ್​ ಅವರ ಕಣ್ಣಿನ ಆಪರೇಷನ್​ ಮಾಡಿಸಿದ್ದಾರೆ.ಪತಿಯ ಕಣ್ಣಿನ ಆಪರೇಷನ್​ಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದಕ್ಕೆ ದಂಪತಿಗಳು ವಿಡಿಯೋ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರಿಗೆ ಧನ್ಯವಾದ ತಿಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular