ಬೆಳಗಾವಿ : ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಕೃಷಿಹೊಂಡಕ್ಕೆ ಬಿದ್ದು ಮೂವರು ಬಾಲಕರು ಸಾವನಪ್ಪಿದ ದಾರುಣ ಘಟನೆ ನಡೆದಿದೆ.
ಸ್ನೇಹಿತರು ಸೇರಿಕೊಂಡು ಸುತ್ತಾಡಲು ಹೋದಾಗ ಕೃಷಿಹೊಂಡದಲ್ಲಿ ಬಿದ್ದಿದ್ದು ಇಂಗಳಿ ಗ್ರಾಮದ ಪ್ರಥಮೇಶ ಕೆರಬಾ 13, ಅಥರವ ಸೌಂದಲಗೆ 15, ಸಮರ್ಥ ಚೌಗಲೆ 13 ಮೃತಪಟ್ಟ ಬಾಲಕರು ಎಂದು ತಿಳಿದಿದೆ. ಬಾಲಕರು ಮನೆಗೆ ಬಾರದಿದ್ದಾಗ ಪೋಷಕರಿಂದ ಹುಡುಕಾಟ ನಡೆಸಿದ್ದು ಬಳಿಕ ಕೃಷಿಹೊಂಡದಲ್ಲಿ ಬಿದ್ದ ಸಾವನ್ನಪ್ಪಿರೋ ವಿಚಾರ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ದೊರೆತಿದೆ.
ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಮೃತದೇಹಗಳನ್ನ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ,ಬೆಳಗಾವಿ ಜಿಲ್ಲೆ ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದ್ದು ಸ್ಥಳಕ್ಕೆ ಚಿಕ್ಕೋಡಿ ತಹಶಿಲ್ದಾರ, ಪೊಲೀಸರಿಂದ ಭೇಟಿ ನೀಡಿ ನೀಡಿಪರಿಶೀಲನೆ ನಡೆಸಿದ್ದಾರೆ.


