ಬೆಳಗಾವಿ : ಬೆಳಗಾವಿ ನಗರದ ಹೃದಯಭಾಗದಲ್ಲಿ ಇರೋ ಪಾಂಗೋಳ ಗಲ್ಲಿಯಲ್ಲಿ ಅಶ್ವತ್ಥಾಮ ದೇವಸ್ಥಾನಕ್ಕೆ ಅನ್ಯಕೋಮಿನ ಯುವಕನಿಂದ ಕಲ್ಲು ತೂರಾಟ ನಡೆದ ಘಟನೆ ನಿನ್ನೆ ರಾತ್ರಿ ನಡೆದಿದೆ
ಪಾಂಗೋಳ ಗಲ್ಲಿಯಲ್ಲಿ ಇರೋ ದೇವಸ್ಥಾನಕ್ಕೆ ದೊಡ್ಡ ಗಾತ್ರದ ಕಲ್ಲನ್ನು ಎಸೆದಿದ್ದ ಅನ್ಯಕೋಮಿನ ಯುವಕನನ್ನ ಕಂಬಕ್ಕೆ ಕಟ್ಟಿ ಯದ್ವಾತದ್ವಾ ಥಳಿಸಿ
ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಬೆಳಗಾವಿಯ ಉಲ್ವಜ ನಗರದ ನಿವಾಸಿ ಯಾಸೀರ್ ಯೂಸುಫ್ ನರಸದಿ 19 ಎಂದು ತಿಳಿದಿದೆ.
ಹೋಳಿ ಹಬ್ಬದ ದಿನ ಪಾಂಗೋಳ ಗಲ್ಲಿಯಲ್ಲಿ ಅಪ್ರಾಪ್ತ ಹಿಂದೂ ಯುವಕನಿಂದ ಬುರ್ಕಾ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಕ್ಕೆ ದೇವಸ್ಥಾನಕ್ಕೆ ಕಲ್ಲು ಎಸೆದಿದ್ದಾನೆಂದು ಆರೋಪಿ ಯಾಸೀರ್ ಹೇಳಿದ್ದಾನೆ. ಕಲ್ಲು ಎಸೆದು ಎಸ್ಕೇಪ್ ಆಗುತ್ತಿದ್ದವನನ್ನ ಹಿಡಿದು ಸಾರ್ವಜನಿಕರು ಥಳಿಸಿದ್ದು ಆರೋಪಿಯನ್ನು ದೇವಾಲಯದ ಮುಂದೆ ನಿಲ್ಲಿಸಿ ಕ್ಷಮೆ ಕೇಳಿದ್ದಾರೆ.
ಪಾಂಗೋಳ ಗಲ್ಲಿಯಲ್ಲಿ ಬೀಗಿ ಪೊಲೀಸ್ ಭದ್ರತೆ ನಿಯೋಜಿಸಿದ್ದು ಸ್ಥಳದಲ್ಲಿ ಬೀಗಿವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಠಾಣೆ ಮುಂದೆ ನೂರಾರು ಹಿಂದೂ ಯುವಕರು ಜಮಾವಣೆಗೊಂಡಿದ್ದು ಪರಿಸ್ಥಿತಿ ಯನ್ನು ಎ.ಸಿ.ಪಿ ತಿಳಿಗೊಳಿಸಿದ್ದಾರೆ.ಈ ಬಗ್ಗೆ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


