ಬೆಳಗಾವಿ ; ಕಲಬುರ್ಗಿ ಜಿಲ್ಲೆ ಜೇವರ್ಗಿ ಬೈಪಾಸ್ ಬಳಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಇನ್ನೋವಾ ಕಾರಿನಲ್ಲಿ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಮಹಾಂತೇಶ ಬೀಳಗಿ ಸೇರಿ ಮೂವರು ಸಾವನಪ್ಪಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ನಗರದವರಾಗಿದ್ದ ಮಹಾಂತೇಶ ಬೀಳಗಿ ಸೇರಿ ಐದು ಜನ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ಮಹಾಂತೇಶ ಬೀಳಗಿ ಜೊತೆ ಪ್ರಯಾಣಿಸುತಿದ್ದ ಇನ್ನಿರ್ವರು ಸಹ ಸ್ಥಳದಲ್ಲೆ ಸಾವನಪ್ಪಿದ್ದಾರೆ.
ರಾಮದುರ್ಗದಲ್ಲಿ ಮಹಾಂತೇಶ ಬೀಳಗಿಯವರ ಮನೆ ಮುಂದೆ ಕುಟುಂಬಸ್ಥರು ಜಮಾಯಿಸಿದ್ದಾರೆ.
ಪ್ರಾಥಮಿಕ ಶಿಕ್ಷಣ ಮಹಾಂತೇಶ ಬೀಳಗಿಯವರು ರಾಮದುರ್ಗದಲ್ಲೇ ಮುಗಿಸಿದ್ದು ದಾವಣಗೆರೆ ಜಿಲ್ಲಾಧಿಕಾರಿಯಾಗಿ ಜನಸ್ನೇಹಿ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದರು.
ಕೋವಿಡ್ ಸಮಯದಲ್ಲೂ ಜನಮೆಚ್ಚುಗೆ ಕಾರ್ಯ ಮಾಡಿ ನೂರಾರು ಜನರ ಜೀವ ರಕ್ಷಿಸಿದ್ದ ಅಧಿಕಾರಿದ್ದಾರೆ.ರಾಮದುರ್ಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು ಸ್ಥಳಕ್ಕೆ ಸ್ಥಳೀಯ ಪೊಲೀಸರು ಬೇಟಕ ನೀಡಿ ಪರಿಶೀಲನೆ ನಡೆಸಿದ್ದಾರೆ.


