Saturday, July 25, 2026
Homeರಾಜ್ಯಬೆಳಗಾವಿ : ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರಿದ ಮೂರು ವರ್ಷದ ಬಾಲಕ.

ಬೆಳಗಾವಿ : ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರಿದ ಮೂರು ವರ್ಷದ ಬಾಲಕ.

ಬೆಳಗಾವಿ : ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ತೋರಿಸಿರುವ ಪಟ್ಟಣದ 3 ವರ್ಷ, 6 ತಿಂಗಳು ವಯಸ್ಸಿನ ಸೂರ್ಯನ್ ನಾರಾಯಣ ಜೋಶಿ ಬಾಲಕ ತನ್ನ ಅಮೋಘ ಜ್ಞಾಪಕ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಸೇರುವ ಮೂಲಕ ಬೈಲಹೊಂಗಲದ ಕುಲಕರ್ಣಿ ಗಲ್ಲಿ ನಿವಾಸಿ ನಾರಾಯಣ ಜ್ಯೋಶಿ ಪುತ್ರ ಸೂರ್ಯನ್ ನಾರಾಯಣ ಜೋಶಿ ಅಮೋಘ ಸಾಧನೆ ಕೀರ್ತಿ ತಂದಿದ್ದಾನೆ.

ಸೌರಮಂಡಲದ ಎಲ್ಲ ಗ್ರಹಗಳನ್ನು ಗುರುತಿಸುವುದು, ಶ್ಲೋಕಗಳ ಪಠಣ, ಇಂಗ್ಲಿಷ, ಕನ್ನಡ ನರ್ಸರಿ ರಾಯಿಮ್ಸ್ ಹೇಳುವುದು, ಬಾಸ್ಕೆಟ ಬಾಲ್ ಆಡುವುದು, ಕನ್ನಡ ಇಂಗ್ಲಿಷ ವರ್ಣ ಮಾಲೆ ಹೇಳುವುದು ಅದರೊಟ್ಟಿಗೆ ಶಬ್ದ ಗುರುತಿಸುವುದು. ಕನ್ನಡ, ಇಂಗ್ಲಿಷ ಸಂಖ್ಯೆಗಳನ್ನು ಪಟಪಟನೆ ಹೇಳುವುದು, ಇಂಗ್ಲಿಷನಲ್ಲಿ ಕ್ರಿಯಾಪದ ಹೇಳುವ ಜತೆ ಅವುಗಳ ಅನುಕರಣೆ ಮಾಡುವುದು. ಆಕಾರಗಳ ಹೆಸರು, ಇಂಗ್ಲಿಷ ನಲ್ಲಿ ದೇಹದ ಭಾಗಗಳನ್ನು ಹೇಳುವುದು, ಅವುಗಳನ್ನು ಗುರುತಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಸೇರಿದ್ದಾನೆ.

ಸೂರ್ಯನ್ ಗೆ ಪ್ರಶಸ್ತಿ ಪತ್ರ, ಮೆಡಲ್, ಬೆಲೆ ಬಾಳುವ ಪೆನ್, ಗುರುತಿನ ಚೀಟಿ ನೀಡಿ ಗೌರವಿಸಲಾಗಿದೆ. ಹೊಸದಿಲ್ಲಿಯ ಇಂಡಿಯಾ ಬುಕ್’ ಆಫ್ ರೆಕಾಡ್ರ್ಸ್ ಸಂಸ್ಥೆಯವರು ಮಕ್ಕಳ ಜಾಯ ಕುರಿತು ಪರೀಕ್ಷೆ ನಡೆಸಿ ಈ ಪ್ರಶಸ್ತಿ ನೀಡಿದ್ದಾರೆ.

ಸೂರ್ಯನ್ ಜಾಣ್ಮೆ ನೋಡಿ ಪಾಲಕರು ಪರೀಕ್ಷೆಗೆ ಒಳಪಡಿಸಿದ್ದರು. ಅದರಲ್ಲಿ ಸೈ ಎನಿಸಿಕೊಂಡಿರುವ ಸೂರ್ಯನ್ 2023 ಜುಲೈ. 8 ರಂದು ಪ್ರಶಸ್ತಿಗೆ ಆಯ್ಕೆಯಾಗಿದ್ದನು.

ಪಟ್ಟಣದ ಕುಲಕರ್ಣಿ ಗಲ್ಲಿ ನಾರಾಯಣ ಜೋಶಿ ಅವರ ಪುತ್ರನಾಗಿದ್ದು ಸೇವಾಬಾರತಿ ಶಿಕ್ಷಣ ಸಂಸ್ಥೆಯಲ್ಲಿ ನರ್ಸರಿ ಓದುತ್ತಿದ್ದಾನೆ. ಈತನ‌ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular