ಬೆಂಗಳೂರು : ರಾಜ್ಯದಲ್ಲಿ ಶನಿವಾರ ಪಟಾಕಿ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ-ತಮಿಳುನಾಡು ಗಡಿಭಾಗದ ಅತ್ತಿಬೆಲೆಯಲ್ಲಿ ಅಂಗಡಿಯ ಮಾಲೀಕ ನವೀನ್ ಅವರು ಟ್ರಕ್ನಿಂದ ಪಟಾಕಿಗಳನ್ನು ಇಳಿಸುತ್ತಿದ್ದಾಗ ಒಂದು ಬಾಕ್ಸ್ಗೆ ಬೆಂಕಿ ಹೊತ್ತಿಕೊಂಡಿದೆ. ಪಟಾಕಿ ಹೊತ್ತಿ ಹುರಿದ ಪರಿಣಾಮ ಹಲವು ಸಾವು ನೋವು ಸಂಭವಿಸಿದೆ .
ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ಮತ್ತು ಅದರ ಮುಂದೆ ಎರಡು ಸುಟ್ಟ ವಾಹನಗಳನ್ನು ವೀಡಿಯೊಗಳು ತೋರಿಸಿವೆ “ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದಾಗ ಹಲವಾರು ಶವಗಳನ್ನು ಹೊರತೆಗೆದರು. ಮೃತರಲ್ಲಿ ಐವರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯವರು. ಕನಿಷ್ಠ 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್ ರಾಜೇಶ್ವರಿ, ಪೊಲೀಸ್ ಉಪ ಮಹಾನಿರೀಕ್ಷಕ (ಸೇಲಂ ರೇಂಜ್) ಮಾಹಿತಿಯ ಪ್ರಕಾರ “ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕನಿಷ್ಠ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕೊಲ್ಲಲ್ಪಟ್ಟ ಕೆಲವರು ತಮಿಳುನಾಡು ಮೂಲದವರು ಎಂದು ವರದಿಗಳು ಸೂಚಿಸುತ್ತವೆ”.


