Friday, November 22, 2024
Flats for sale
Homeವಿದೇಶಬೆಂಗಳೂರು : ಹೊಟ್ಟೆಯಲ್ಲಿ 20 ಕೋಟಿ ರೂ ಮೌಲ್ಯದ 99 ಕೊಕೇನ್ ಕ್ಯಾಪ್ಸೂಲ್‌ ಸಾಗಿಸುತ್ತಿದ್ದ ನೈಜೀರಿಯನ್‌...

ಬೆಂಗಳೂರು : ಹೊಟ್ಟೆಯಲ್ಲಿ 20 ಕೋಟಿ ರೂ ಮೌಲ್ಯದ 99 ಕೊಕೇನ್ ಕ್ಯಾಪ್ಸೂಲ್‌ ಸಾಗಿಸುತ್ತಿದ್ದ ನೈಜೀರಿಯನ್‌ ಪ್ರಜೆಯ ಬಂಧನ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಅಧಿಕಾರಿಗಳು ಪ್ರಯಾಣಿಕರಿಂದ 20 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾದ ಪ್ರಜೆಯೊಬ್ಬ ತನ್ನ ಹೊಟ್ಟೆಯೊಳಗೆ ಕ್ಯಾಪ್ಸುಲ್‌ಗಳಲ್ಲಿ ಕೊಕೇನ್ ಅನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದು , ಕಸ್ಟಮ್ಸ್ ಅಧಿಕಾರಿಗಳು ಬಚ್ಚಿಟ್ಟಿದ್ದ 99 ಕ್ಯಾಪ್ಸುಲ್‌ 2 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕ ಇಥಿಯೋಪಿಯಾದ ಅಡಿಸ್ ಅಬಾಬಾದಿಂದ ಬೆಂಗಳೂರಿಗೆ ಬರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಯ ಪ್ರಕಾರ ಆರೋಪಿಯನ್ನು ಎಲ್ಲಾ ಕಾನೂನು ನಿಯಮಗಳ ಅನ್ವಯ ಆಸ್ಪತ್ರೆಯಲ್ಲಿ ದಾಖಲಿಸಿದ್ದು ವೈದ್ಯರ ಸಲಹೆಯ ಮೇರೆಗೆ ಹೊಟ್ಟೆಯ ಒಳಗಿಂದ ಕೋಟಿ ಬೆಲೆಬಾಳುವ ಕ್ಯಾಪ್ಸೂಲ್‌ನ್ನು ಹೊರತೆಗೆಯಲು 5 ದಿನಗಳ ಚಿಕಿತ್ಸೆಯನ್ನು ಪಡೆಯಲಾಗಿತ್ತು ಎಂದು ತಿಳಿಯಲಾಗಿದೆ .

ಶಂಕಿತ ಆರೋಪಿ ಡಿಸೆಂಬರ್ 11 ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾನೆ ಎಂದು ವರದಿಯಾಗಿದೆ. ಆತನ ಮೇಲೆ ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಳ್ಳಸಾಗಣೆಯಲ್ಲಿ ಇದು ಅತಿದೊಡ್ಡ ಯತ್ನವಾಗಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನೈಜೀರಿಯಾದ ಪ್ರಜೆಯು ವೈದ್ಯಕೀಯ ಚಿಕಿತ್ಸಾ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ 21 ಕೋಟಿ ರೂ ಅಂದರೆ ದೊಡ್ಡದೇನಲ್ಲ ,ಆದರೆ ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬ ಇರುವ ಕಾರಣ ಇದೊಂದು ಅಂತ್ಯಂತ ದೊಡ್ಡ ಮಟ್ಟದ ಡೀಲ್ ಆಗಿದೆ ಇದರ ಹಿಂದೆ ಅನೇಕರು ಇದ್ದಾರೆ ಎಂಬುದು ಜನಸಾಮನ್ಯರ ಮಾತು .

RELATED ARTICLES

LEAVE A REPLY

Please enter your comment!
Please enter your name here

Most Popular