Saturday, March 14, 2026
Flats for sale
Homeರಾಜ್ಯಬೆಂಗಳೂರು : ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಗೆ ಭಾರಿ ವಿರೋಧ ವ್ಯಕ್ತ, ಬೀದಿಗೆ ಬಿದ್ದ...

ಬೆಂಗಳೂರು : ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಗೆ ಭಾರಿ ವಿರೋಧ ವ್ಯಕ್ತ, ಬೀದಿಗೆ ಬಿದ್ದ 25 ಸಾವಿರ ವಾಹನ ನಂಬರ್ ಪ್ಲೇಟ್ ತಯಾರಕರು,ಲೋಕಾಯುಕ್ತಕ್ಕೆ ದೂರು.

ಬೆಂಗಳೂರು : ಯಾವುದೇ ಸರಕಾರ ಬಂದರೂ ಆ ಸರಕಾರಕ್ಕೆ ಬೇಕಾದ ವ್ಯಕ್ತಿಗಳಿಗೆ ಬೇಕಾದ ರೀತಿಯಲ್ಲಿ ಪರ್ಸಂಟೇಜ್ ಗಾಗಿ ಯೋಜನೆಗಳನ್ನು ಜಾರಿಗೊಳಿಸುವುದು ಎಲ್ಲರಿಗೂ ತಿಳಿದ ವಿಷಯ ,ಆದರೆ ಇಲ್ಲೊಂದು ಹೊಸ ಲೂಟಿ ಹೊಡೆಯುವ ಯೋಜನೆ ಶುರುವಾಗಿದ್ದು ಇದರಿಂದ ಜನಸಾಮನ್ಯರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ,ಉದ್ಯೋಗಿಗಳು ಸಾಲ ಮೂಲ ಮಾಡಿ ಹೊಟ್ಟೆಪಾಡಿಗೋಸ್ಕರ ನಂಬರ್ ಪ್ಲೇಟ್ ಉದ್ಯಮಕ್ಕೆ ಹಣ ಹೂಡಿಕೆ ಮಾಡಿ ಕೈ ತೊಳೆದುಕೊಳ್ಳುವಷ್ಟರಲ್ಲಿ ಸರಕಾರ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಂತ ಹೊಸ ಡೀಲ್ ಸುರು ಮಾಡಿದೆ .

ರಾಜ್ಯದಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಗೆ ಭಾರಿ ವಿರೋಧ ವ್ಯಕ್ತವಾಗ್ತಿದ್ದು ಯಾವುದೇ ಸೇಫ್ಟಿ ಇಲ್ಲದಿರುವ ನಂಬರ್ ಪ್ಲೇಟ್ ಗೆ ಹೈ ಸೆಕ್ಯುರಿಟಿ ನಂಬರ್ ‌ಪ್ಲೇಟ್ ಎಂದು ಹಣ ಪೀಕಲಾಗುತ್ತಿದೆ. ಹೊರ ರಾಜ್ಯದ ಕೇವಲ ನಾಲ್ಕು ಕಂಪನಿಗಳಿಗೆ ಮಾತ್ರ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಮಾಡಲು ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಟೆಂಡರ್ ನೀಡಿದ್ದಾರೆ. ಇದರಿಂದ ರಾಜ್ಯದ 25 ಸಾವಿರ ಕನ್ನಡಿಗರು ಬೀದಿಗೆ ಬೀಳಲಿದ್ದಾರೆ ಎಂದು ಕರ್ನಾಟಕ ವಾಹನ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಈ ವರ್ಷದ ಆಗಸ್ಟ್‌ 17 ರಿಂದ ಹಳೆಯ ವಾಹನಗಳಿಗೂ ಹೆಚ್ಎಸ್ಆರ್ಪಿ ನೇಮ್ ಬೋರ್ಡ್ ಕಡ್ಡಾಯ ಮಾಡಿ ಏಕಾಏಕಿ ಆದೇಶ ಮಾಡಲಾಗಿದೆ. 2019 ರಿಂದ ರಿಜಿಸ್ಟ್ರೇಷನ್ ಆಗಿರುವ ವಾಹನಗಳಿಗೆ ಈಗಾಗಲೇ ಮಾಡಲಾಗಿದೆ. ಆದರೆ 2019 ರ ಹಿಂದೆ ರಿಜಿಸ್ಟರ್ ಆಗಿರುವ ವಾಹನಗಳು ರಾಜ್ಯದಲ್ಲಿ ಅಂದಾಜು 2 ಕೋಟಿ 10 ಲಕ್ಷ ಕಾರು,ಬೈಕ್ ಹಾಗೂ ಲಾರಿಗಳಿವೆ.ಆದರೆ ದಿಡೀರನೆ ರಾಜ್ಯ ‌ಸಾರಿಗೆ ಇಲಾಖೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಮಾಡಲು ಕಾರಿಗೆ – 500 ರುಪಾಯಿ ಪಡೆದುಕೊಳ್ಳಬೇಕೆಂದು ಹೇಳಿದೆ. ಆದರೆ ನಾಲ್ಕು ಕಂಪನಿಗಳು 750 ರುಪಾಯಿ ಚಾರ್ಜ್ ಮಾಡ್ತಿದ್ದಾರೆ. ಬೈಕ್ ಗೆ 250 ರಿಂದ 300 ರುಪಾಯಿ ಪಡೆದುಕೊಳ್ಳಲು ಹೇಳ್ತಿದ್ದಾರೆ. ಆದರೆ ಇವರು 450 ರಿಂದ 500 ರುಪಾಯಿ ಹಣ ಪಡೆದುಕೊಳ್ಳುತ್ತಿದ್ದಾರೆ.

ಇದೊಂದು ಸರಕಾರದ ಲೂಟಿ ಯೋಜನೆ ಅಂತಾನೂ ಹೇಳಬಹುದು ಯಾಕೆಂದರೆ ಹೊಸ ನಂಬರ್ ಪ್ಲೇಟ್ ಹೇಗೂ ಬಂತು ,ಹಾಕದವರಿಗೆ ಪೊಲೀಸರಿಂದ ದಂಡ ಸಂಗ್ರಹ ಕೂಡ ಆಯಿತು ,ಫೆಬ್ರವರಿ- 17 ರೊಳಗೆ ಎಲ್ಲಾ ಕಾರು ಬೈಕ್ ಗಳಿಗೆ ಅಳವಡಿಸಲು ಆದೇಶ ಮಾಡಲಾಗಿದೆ. ಅಳವಡಿಸಿಲ್ಲ ಅಂದರೆ ದಂಡ ಹಾಕಲಾಗುತ್ತದೆ ಎಂದು ರಾಜ್ಯ ಸಾರಿಗೆ ‌ಇಲಾಖೆ ಆದೇಶ ಹೊರಡಿಸಿದೆ. ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಮಾಡಲು ಬೇರೆ ಬೇರೆ ರಾಜ್ಯದ ನಾಲ್ಕು ಕಂಪನಿಗಳಿಗೆ ಇದರಿಂದ 1200 ರಿಂದ 1400 ಕೋಟಿ ಆದಾಯ ಬರುತ್ತದೆ ಎಂದು ವರದಿಯಾಗಿದೆ ಆದರೆ ರಾಜ್ಯದಲ್ಲಿರುವ 25000 ಇಪ್ಪತ್ತೈದು ಸಾವಿರ ಕನ್ನಡಿಗರ ಗತಿ ಏನು ಎಂಬುದು ಜನರ ಮಾತು.

ಈ‌ ನಂಬರ್ ಪ್ಲೇಟ್ ಗಳಲ್ಲಿ ಯಾವುದೇ ಹೈ ಸೆಕ್ಯುರಿಟಿ ಇಲ್ಲ ಇದರಲ್ಲಿ ಯಾವುದೇ ಚಿಪ್ಪು ಇಲ್ಲ ಜಿಪಿಎಸ್ ಟ್ರ್ಯಾಕಿಂಗ್ ಕೂಡ ಇರೋದಿಲ್ಲ ಕೇವಲ ದುಡ್ಡು ಮಾಡಲು ಅಷ್ಟೇ ಎಚ್ಎಸ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಲು ಹೇಳ್ತಿದ್ದು, ಸದ್ಯ ಸಾರಿಗೆ ಇಲಾಖೆಯ ಈ ನಿರ್ಧಾರ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘ ಸಿಡಿಮಿಡಿ ಗೊಳ್ಳುವಂತೆ ಮಾಡಿದ್ದು, ಇದ್ರಿಂದ ಸುಮಾರು 25 ಸಾವಿರ ಕುಟುಂಬಗಳು ಬೀದಿಗೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

HSRP ಅಂದ್ರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಎಂದರ್ಥ. ವಾಹನಗಳ ನಂಬರ್ ಪ್ಲೇಟ್ನಲ್ಲೇ ಈ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತೆ. ಈ ತಂತ್ರಜ್ಞಾನದಿಂದ ವಾಹನ ಕಳ್ಳತನ, ಕದ್ದ ವಾಹನ ಬಳಸಿ ಮಾಡೋ ಕೃತ್ಯಗಳನ್ನು ತಡೆಯಲು ಸಹಾಯವಾಗುತ್ತೆ. ಜೊತೆಗೆ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಬೇಧಿಸಲು ಅನುಕೂಲಗಲಿದೆ. HSRP ನಂಬರ್ ಪ್ಲೇಟ್ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ. ಇನ್ನೂ ಈ ತಂತ್ರಜ್ಞಾನ ಅಳವಡಿಸಿರೋ ವಾಹನ ರಸ್ತೆಯಲ್ಲಿ ಸಂಚರಿಸುವಾಗಲೇ ವಾಹನವನ್ನು ಗುರುತಿಸಬಹುದು. ಇನ್ನೂ ಈ ನಂಬರ್‌ ಪ್ಲೇಟ್‌ಗಳಲ್ಲಿ ಲೇಸರ್ ತಂತ್ರಜ್ಞಾನದ ಅಳವಡಿಕೆಯೂ ಮಾಡಲಾಗಿರುತ್ತದೆ ಅನ್ನುವುದು ಸಾರಿಗೆ ಇಲಾಖೆಯ ಅಧಿಕಾರಿಗಳ ವಾದ. ಆದರೆ ಈ ಹೆಚ್ಎಸ್ಆರ್ಪಿ ಪ್ಲೇಟ್ ಯಾವುದೇ ಸೆಕ್ಯುರಿಟಿ ಫಿಚರ್ಸ್ ಕೂಡ ಅಳವಡಿಸಿಲ್ಲ ಎನ್ನುವುದು ನಂಬರ್ ‌ಪ್ಲೇಟ್ ತಯಾರಕರ ಮಾತು.

HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇದ್ರೆ ದಂಡಾಸ್ತ್ರ ಪ್ರಯೋಗ ಮಾಡ್ತಿವಿ ಅಂತ ಸಾರಿಗೆ ಇಲಾಖೆ ತಿಳಿಸಿದೆ. ಆದ್ರೆ ಈ ಪ್ಲೇಟ್ಗಳ ತಯಾರಿಕೆಗೆ ಕೇವಲ ನಾಲ್ಕು ಕಂಪನಿಗೆ ಮಾತ್ರ ಅನುಮತಿ ಕೊಟ್ಟಿರೋದು ಫೆಬ್ರವರಿ ಒಳಗೆ ಎರಡು ಕೋಟಿ ವಾಹನಗಳಿಗೆ ನಂಬರ್ ‌ಪ್ಲೇಟ್ ಅಳವಡಿಸಲು ಸಾಧ್ಯವಾ ಅನ್ನೋದು ನಂಬರ್ ಪ್ಲೇಟ್ ತಯಾರಕರ ಪ್ರಶ್ನೆ.

RELATED ARTICLES

LEAVE A REPLY

Please enter your comment!
Please enter your name here

Most Popular