Tuesday, February 3, 2026
Flats for sale
Homeದೇಶಬೆಂಗಳೂರು : ಹಲವು ಕಡೆ ಎನ್‌ಐಎ ದಾಳಿ, ಶಂಕಿತ ಉಗ್ರನ ನಿವಾಸದಲ್ಲಿ ಬಾಂಬ್ ಬಳಕೆಯ 7...

ಬೆಂಗಳೂರು : ಹಲವು ಕಡೆ ಎನ್‌ಐಎ ದಾಳಿ, ಶಂಕಿತ ಉಗ್ರನ ನಿವಾಸದಲ್ಲಿ ಬಾಂಬ್ ಬಳಕೆಯ 7 ಕೆ.ಜಿ. ರಾಸಾಯನಿಕ ಪತ್ತೆ.

ಬೆಂಗಳೂರು : ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ( ಎನ್‌ಐಎ ) ಅಧಿಕಾರಿಗಳು, ನಗರದ ಹಲವು ಕಡೆಗಳಲ್ಲಿ ಇಂದು ಮುಂಜಾನೆಯಿಂದ ಏಕಕಾಲದಲ್ಲಿ ದಾಳಿ ನಡೆಸಿದ ವೇಳೆ ಬಾಂಬ್ ತಯಾರಿಕೆಗೆ ಬಳಸುವ ೭ ಕೆ.ಜಿ. ಸೋಡಿಯಂ ನೈಟ್ರೇಟ್ ಅನ್ನು ಎನ್‌ಐ ಎ ವಶಪಡಿಸಿಕೊಂಡಿದೆ.

ಈ ನಡುವೆ ಇತ್ತೀಚಿಗೆ ಎನ್‌ಐಎ ನಡೆಸಿದ ದಾಳಿಯಲ್ಲಿ ಬ್ಯಾಡರಹಳ್ಳಿಯಲ್ಲಿ ಶಮಿವುಲ್ಲಾ ವಾಸವಿದ್ದ ಬಾಡಿಗೆ ಮನೆಯಲ್ಲಿ ಸ್ಫೋಟಕ ತಯಾರಿಕೆಗೆ ಬಳಸುವ 7 ಕೆಜಿ ಸೋಡಿಯಂ ನೈಟ್ರೇಟ್ ಪತ್ತೆಯಾಗಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಶಂಕೀತ ಉಗ್ರ ಶಮಿವುಲ್ಲಾ7 ಕೆಜಿ ಸೋಡಿಯಂ ನೈಟ್ರೇಟ್ ನ್ನು ಕೆಲ ದಿನಗಳಿಂದ ಬಾಡಿಗೆಗಿದ್ದ ಮನೆಯಲ್ಲಿ ಶೇಖರಿಸಿದ್ದು,ಅದನ್ನು ಸ್ಫೋಟಕ ತಯಾರಿಕೆಗೆ ಬಳಸುವ ಮುಂದಾಗಿದ್ದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ದಾಳಿ ವೇಳೆ ನಿಖಿಲ್ ಶಮಿವುಲ್ಲಾ ಸೂಫಿಯಾನ್ ಆಗಿ ಮತಾಂತರಗೊAಡಿದ್ದ ,ನಿಷೇಧಿತ ಪಿಎಫ್‌ಐ ಬಳ್ಳಾರಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುಲೇಮಾನ್, ಅಜಾಜ್ ಅಹ್ಮದ್, ತಬ್ರೇಜ್,ಜಾಮಿಲ್ ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

ದಾಳಿ ವೇಳೆ ಸಿಕ್ಕಿಬಿದ್ದ ಶಂಕಿತ ಐಸಿಸ್ ಉಗ್ರ ಅಲಿ ಅಬ್ಬಾಸ್ ಪೇಟಿವಾಲ ನೀಡಿದ ಮಾಹಿತಿ ಅಲ್ಲದೇ ಇತರ ಮೂಲಗಳಿಂದ ಬAದ ಮಾಹಿತಿಯನ್ನು ಆಧರಿಸಿ ಇಂದು ಮತ್ತೆ ದಾಳಿ ನಡೆಸಲಾಗಿದೆ.

ಸುಲ್ತಾನ್ ಪಾಳ್ಯ, ಆರ್‌ಟಿ ನಗರ, ಶಿವಾಜಿನಗರ, ಪುಲಿಕೇಶಿನಗರ ಸೇರಿದಂತೆ ನಗರದ ೨೦ಕ್ಕೂ ಹೆಚ್ಚ ಕಡೆಗಳಲ್ಲಿ ದಾಳಿ ನಡೆಸಿ ಶೋಧ ಕೈಗೊಳ್ಳಲಾಗಿದೆ. ಹಿಂದೆ ಆರ್‌ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಎನ್‌ಐಎ ತಂಡ ದಾಳಿ ನಡೆಸಿತ್ತು.ಅಲ್ಲಿ ಪಡೆದ ಮಾಹಿತಿಯಂತೆ ಪುಲಿಕೇಶಿ ನಗರದ ಅಲಿ ಅಬ್ಬಾಸ್ ಮನೆ ಮೇಲೆ ಎನ್‌ಐಎ ತಂಡ ದಾಳಿ ನಡೆಸಿದ್ದ, ಅಲಿ ಅಬ್ಬಾಸ್ ಪೇಟಿವಾಳ ಬಳಿ ಹಲವಾರು ಸ್ಫೋಟಕ ಮಾಹಿತಿಗಳು ದೊರೆತಿವೆ. ಪೇಟಿವಾಲ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಕಳೆದ ವಾರ ನಗರದಲ್ಲಿ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಿಸಿ ಬಿಟ್ಟು ಕಳಿಸಿದ್ದ ಶಂಕಿತ ಉಗ್ರ ಅಲಿ ಅಬ್ಬಾಸ್‌ನನ್ನು ಎನ್?ಐಎ ಅಧಿಕಾರಿಗಳು ಮತ್ತೆ ಅರೆಸ್ಟ್ ಮಾಡಿದ್ದಾರೆ.

ಕಳೆದ ವಾರ ಬೆಂಗಳೂರು ಸೇರಿದAತೆ ಮಹಾರಾಷ್ಟçದ 44 ಸ್ಥಳಗಳಲ್ಲಿ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಐಸಿಸ್‌ನೊಂದಿಗೆ ಸAಪರ್ಕದಲ್ಲಿದ್ದ 15 ಶಂಕಿತರನ್ನು ಬAಧಿಸಿ, ಭಾರಿ ಪ್ರಮಾಣದ ಶಸ್ತಾçಸ್ತçಗಳನ್ನು ವಶಪಡಿಸಿಕೊಂಡಿದ್ದರು.

ಬೆAಗಳೂರಿನಲ್ಲಿ ನಡೆದಿದ್ದ ದಾಳಿಯ ವೇಳೆ ಅಲಿ ಅಬ್ಬಾಸ್?ನನ್ನು ವಶಕ್ಕೆ ಪಡೆದು ಕರೆದೊಯ್ಯಲಾಗಿತ್ತು. ನಂತರ ವಿಚಾರಣೆ ನಡೆಸಿ ಕಳುಹಿಸಲಾಗಿತ್ತು. ಅಬ್ಬಾಸ್ ಅಲಿ ಮನೆಯಲ್ಲಿ ದೊರೆತ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಮತ್ತಷ್ಟು ವಿಚಾರಣೆಗಾಗಿ ಕರೆಸಿದ್ದಲ್ಲದೆ, ಈಗ ಅಬ್ಬಾಸ್ ಅಲಿಯನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತ ಐಎಸ್ (ಇಸ್ಲಾಮಿಕ್ ಸ್ಟೇಟ್) ಸಂಘಟನೆ ಜೊತೆ ನಂಟು ಹೊಂದಿ ಯುವಕರನ್ನು ಅದಕ್ಕೆ ಸೇರಲು ಪ್ರಚೋದಿಸುತ್ತಿದ್ದ ಎಂಬ ಆರೋಪವಿದೆ.

ಪುಲಿಕೇಶಿನಗರದ ಮೋರ್ ರಸ್ತೆಯಲ್ಲಿ ವಾಸವಾಗಿದ್ದ ಅಲಿ ಅಬ್ಬಾಸ್ ಪೇಟಿವಾಲ, ಮೂಲತಃ ಮುಂಬೈ ಮೂಲದವನು. ಈತ ಸಾಫ್ಟ್ವೇರ್ ಉದ್ಯೋಗಿಯಾಗಿದ್ದು, ಈತ ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದ. ಹೆಂಡತಿ ಡಯಾಟಿಕ್ ಹಾಸ್ಪಿಟಲ್ ನಡೆಸುತ್ತಿದ್ದಾರೆ. ಇವರು ಶಾಮಾಜ್ ಎಂಬವರಿAದ 2008 ರಲ್ಲಿ 69 ಲಕ್ಷಕ್ಕೆ ಫ್ಲಾಟ್ ಖರೀದಿ ಮಾಡಿದ್ದರು. ಪತ್ನಿ, ಮೂವರು ಮಕ್ಕಳು ಹಾಗು ತಂದೆ ಜೊತೆ ಅಬ್ಬಾಸ್ ವಾಸವಾಗಿದ್ದಾನೆ. ದಾಳಿ ಸಂದರ್ಭದಲ್ಲಿ ಪೇಟಿವಾಲ ಮನೆಯಿಂದ16,49,೦೦೦ ಹಣವನ್ನು ಜಪ್ತಿ ಮಾಡಲಾಗಿತ್ತು. ಮೊಬೈಲ್,
ಲ್ಯಾಪ್‌ಟಾಪ್ ಪರಿಶೀಲನೆ ನಡೆಸಿದ ಬಳಿಕ ಅಬ್ಬಾಸ್‌ನನ್ನು ವಶಕ್ಕೆ ಪಡೆದಿದ್ದರು. ದಾಳಿ ಮಾಡಿದ ಸ್ಥಳಗಳಲ್ಲಿ ಯಾವ ಮಾಹಿತಿ ಹಾಗೂ ದಾಖಲೆಗಳು ಹಾಗೂ ವಸ್ತುಗಳು ಸಿಕ್ಕಿವೆ ಎನ್ನುವುದು ಇನ್ನಷ್ಟರಲ್ಲಿ ತಿಳಿದು ಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular